Friday 10 February 2012

ಹೋಗಿ ಬಾ ಮನವೇ.., ನಾ ಹಾರೈಸುವೆನು...


ಹೋಗಿ ಬಾ ಮನವೇ.., ನಾ ಹಾರೈಸುವೆನು...



ಬಾಳೆಂಬ ಪಯಣದಲಿ ಅರಿಯದೆ
ಜೊತೆಯಾದೆ...
ದಾರಿ ಕವಲಾಯಿತು...
ಮನಸು ಎರಡಾಯಿತು..!!

ಕಾಣದ ದೇವರ ಬಳಿ ಪ್ರತಿಕ್ಷಣವೂ
ಪ್ರಾರ್ಥಿಸುತ್ತಿರುವುದೊಂದೆ
ನಿನ್ನಾ ಸಂತೋಷ..!!

ಎಂದೂ ನಿನ್ನಾ ನೋವನ್ನು ಸಹಿಸದ.,
ಸಹಿಸಿ ಬದುಕದ
ಕಲ್ಮಷವಿರದ ಜೀವವಿದು..
ಬಯಸುತ್ತಿರುವುದೊಂದೆ
ಆರದಿರಲಿ ನನ್ನ ಹೃದಯದ ಸ್ನೇಹದ
ಪ್ರೀತಿಯ ನಂದಾದೀಪವೆಂದು..!!

ಹೋಗಿ ಬಾ ಮನವೇ.., ನಾ ಹಾರೈಸುವೆನು...

ಈ ಜೀವನದ ಮೆಟ್ಟಿಲಿನ ಬರೀ ಒಂದು
ಹಂತ ನೀನು...
ಬಾಳಲ್ಲಿ ಸಂತಸವಾ ಮರಳಿಸಲು ಬಂದ
ಸಾಮಾನ್ಯ
ಜೀವ ನಾನು..!!

ಕಳೆದು ಹೋದ ಕನಸುಗಳೆಲ್ಲಾ.,
ಕವಿಯಬಾರದು ಮನಸ್ಸನ್ನು..
ಬೆಳೆಸುವಂಥಾ ಭಾವನೆಯಲ್ಲಾ.,
ಅರಳಿ ಬೆಳೆಸಲಿ ನಿನ್ನನ್ನು..!!

ನಗುವೊಂದೇ ನಿನಗಿರಲಿ ಎನ್ನುವ
ಈ ಮನಸು..
ಪ್ರೀತಿಯಲೇ ಶುಭಕೋರುತ್ತಿದೆ...

ಹೋಗಿ ಬಾ ಮನವೇ.., ನಾ ಹಾರೈಸುವೆನು...

ಉಳಿದಿರುವೆ ಎಷ್ಟು ದಿನ ನಾನಿಲ್ಲಿ...
ಪಯಣ ಸಾಗಿದೆ..,
ಮುಂದಿನ ದಾರಿಯಲಿ..!!

ಹೋಗಿ ಬಾ ಮನವೇ.., ನಾ ಹಾರೈಸುವೆನು...






10 comments:

  1. ಸುಂದರ ಭಾವಗಳ ಮುದ್ದಾದ ಕವನ....

    ReplyDelete
    Replies
    1. life is the flower for which love is an honey.true love can not failure.

      Delete
  2. ಭಾವಗಳು ಅವಿಯಾಗದಂತೆ ಮನಸ್ಸಿನಲ್ಲಿ ಪಸೆ ಕಟ್ಟಿದಾಗ ಹೀಗೆ ಹರಿದುಬಿಡುತ್ತವೆ ಮನಸ್ಸಿನ ಬಟ್ಟಲಿನಿಂದ, ಹಾಲು ಬಟ್ಟಲಿನಿಂದ ನೊರೆ ಉಕ್ಕಿ ಚೆಲ್ಲಿದಂತೆ.. ಚೆನ್ನಾಗಿದೆ ಅಭಿವ್ಯಕ್ತಿ ದೀಪು.. ಪ್ರೀತಿಯ ಧನ್ಯತೆಯೊಂದಿಗೆ ಭಾವಗಳ ಸಮ್ಮಿಳಿತ ಮತ್ತು ನಿಸ್ವಾರ್ಥ ಅನುಭೂತಿಯನ್ನು ಅಮನಸ್ಸಿಗೆ ಅಚ್ಚೊತ್ತಿಸುತ್ತದೆ.. ನಿನ್ನ ಪದ್ಯಗಳಿಗಿಂತ, ನಿನ್ನ ಗದ್ಯಗಳು ನನಗೆ ಹೆಚ್ಚು ಖುಷಿ ಕೊಡುತ್ತವೆ, ಆದರೆ ಈ ಕವಿತೆ ತನ್ನ ಭಾವೀತ್ಕಟತೆಯಿಂದ ಮನಸ್ಸಿಗೆ ಆಪ್ತವೆನಿಸಿತು..
    ಕಳೆದು ಹೋದ ಕನಸುಗಳೆಲ್ಲಾ.,
    ಕವಿಯಬಾರದು ಮನಸ್ಸನ್ನು..
    ಬೆಳೆಸುವಂಥಾ ಭಾವನೆಯಲ್ಲಾ.,
    ಅರಳಿ ಬೆಳೆಸಲಿ ನಿನ್ನನ್ನು..!!
    ಈ ಸಾಲುಗಳು ಮನಸ್ಸಿನಲ್ಲಿ ಕೂತವು.. ತುಂಬಾ ಚೆನ್ನಾಗಿದೆ ಕವಿತೆ..:)))

    ReplyDelete
  3. Deepuravare... Sundaravad Saalugalannu barediddiri.. Dhanyvaadagalu

    ReplyDelete
  4. bhaavagalu innashtu gaadhavaagali..
    samruddha akshara jagattu nammadaagali..


    manasinda,

    ReplyDelete