Monday 19 September 2011

ಆತ್ಮೀಯ ಸ್ನೇಹಕ್ಕೊಂದು ಪ್ರೀತಿಯ Salam...

ಈ ಸ್ನೇಹ ಅನ್ನೋದು ಅನೀರಿಕ್ಷಿತವಾಗಿ ಹುಟ್ಟಿ ಬೆಳೆಯುತ್ತೆ... But ಹಾಗೆ ಹುಟ್ಟಿದ ಸ್ನೇಹ ಪರಸ್ಪರ ಮನಸ್ಸಿನ ಭಾವನೆಗಳನ್ನ ಅರ್ಥ ಮಾಡಿಕೊಳ್ತಾ.., ನೋವನ್ನ, ದುಃಖವನ್ನು ಹಂಚಿಕೊಳ್ತಾ ಬೆಳೆದು ಕೆಲವೊಂದು ಸಲ ಅದೆಷ್ಟೋ ಜನ್ಮದ ಸಂಬಂಧದ ಹಾಗೆ ಅನ್ನಿಸಿ ಬಿಡ್ತದೆ ಅಲ್ವಾ... ನಾವು ತಂದೆ, ತಾಯಿ And ಬಂಧುಗಳು ಇಲ್ಲದೆ ಇರೋ ಅದೆಷ್ಟೋ ಜನ ಅನಾಥರನ್ನ ಪ್ರತಿನಿತ್ಯ ನೋಡಿರುತ್ತೀವಿ But Friend ಇಲ್ಲದೆ ಇರೋವಂತ ವ್ಯಕ್ತಿಯನ್ನು ಯಾರನ್ನನಾದರೂ ನೋಡಿರಲಿಕ್ಕೆ ಸಾಧ್ಯಾನಾ.. ಖಂಡಿತಾ ಹುಡುಕಿದರೂ ಕೂಡ ಯಾರು ಸಿಗಲ್ಲ..! ತಂದೆ, ತಾಯಿ ಮಮತೆಯಿಂದ ವಂಚಿತರಾಗಬಹುದು, ಬಯಸಿದ ಪೀತಿಯಿಂದಲೂ ವಂಚಿತರಾಗಬಹುದು ಆದ್ರೆ ಸ್ನೇಹದಿಂದ ಯಾರೂ ವಂಚಿತರಾಗೋಕೆ ಸಾಧ್ಯವಿಲ್ಲ.. ಅದೇ ಸ್ನೇಹಕ್ಕಿರೂ ಮಹತ್ವ..!
ಎಲ್ಲಾ ಸಂಬಂಧಗಳೂ ಕೂಡ ಪ್ರತಿಯಾಗಿ ನಮ್ಮಿಂದ ಏನನ್ನಾದರೂ Expect ಮಾಡ್ತವೆ... ಆದ್ರೆ ಇಲ್ಲಿ ಸ್ನೇಹ ಮಾತ್ರ ತುಂಬಾ ವಿಶಿಷ್ಟವಾಗಿ ನಿಲ್ಲುತ್ತೆ..! For Example ತಾಯಿಯೊಡನೆ ಇರಬೇಕಾದ "ಸಹನೆ", ತಂದೆಯೊಡನೆ ಇರಬೇಕಾದ "ಭಯ", ಹಿರಿಯರಿಗೆ ಕೊಡಬೇಕಾದ "ಗೌರವ" ಯಾವುದರ ಅವಶ್ಯಕತೆನೂ ಸ್ನೇಹಕ್ಕೆ ಬೇಕಾಗಿಲ್ಲ... ಸ್ನೇಹಕ್ಕೆ ಬೇಕಾದ್ದು ಕೇವಲ ರಹಸ್ಯಗಳಿಲ್ಲದ ಮುಕ್ತ ಶುದ್ಧ ಮನಸ್ಸು ಜೊತೆಗೆ ಬೊಗಸೆ ಪ್ರೀತಿ ಅಷ್ಟೆ..!!





Basically ಸ್ನೇಹ ಹುಟ್ಟೋದು "ಅವಶ್ಯಕತೆಗೆ"... ಅಂದರೆ ತಂದೆ, ತಾಯಿ And Family ಜೊತೆ ಎಷ್ಟೇ Close ಆಗಿದ್ದರೂ ಕೂಡ.., ಕೆಲವೊಂದು ವಿಷಯಗಳನ್ನ, ಮನಸ್ಸಿನ ಭಾವನೆಗಳನ್ನ ಅವರ ಜೊತೆ Share ಮಾಡಿಕೊಳ್ಳೋಕೆ ಆಗಲ್ಲಾ ಅಂತಾ ಸಂದರ್ಭದಲ್ಲಿ ಒಂದು ಮನಸ್ಸು ತಾನೇ ತಾನಾಗಿ ತನ್ನನ್ನ ಅರ್ಥ ಮಾಡಿಕೊಳ್ಳೋ ಇನ್ನೊಂದು ಮನಸ್ಸನ್ನ Expect ಮಾಡೋದು ಸಹಜನೇ ಅಲ್ವಾ... ಹಾಗೆ ಸ್ನೇಹದಲ್ಲಿ ವಯಸ್ಸಿನ ಭೇದ-ಭಾವವಾಗಲಿ ಅಥವಾ ಗಂಡು-ಹೆಣ್ಣು ಅನ್ನೋ ಭೇದ-ಭಾವವಾಗಲಿ ಇರೋದಿಲ್ಲ... ಅದು ಬಯಸೋದು ಕೇವಲ ತನ್ನನ್ನ ಅರ್ಥ ಮಾಡಿಕೊಳ್ಳೋ ಇನ್ನೊಂದು ಮನಸ್ಸನ ಅಷ್ಟೆ..!!


Collegeನಾ First Day ಎಲ್ಲಾ ಹೊಸತು.., ನಮಗೆ ಅಲ್ಲಿ ಯಾರ ಪರಿಚಯನೂ ಇಲ್ಲಾ.., ಮನಸ್ಸಿನಲ್ಲಿ ಒಂದು ಸಣ್ಣ ಅಳುಕು ಇಟ್ಟಿಕೊಂಡೇ ಹೋಗಿರುತ್ತೀವಿ... ಅದೇ ಭಯದಲ್ಲೆ Class Roomಗೆ ಹೋಗಿ ಕೂತ್ಕೊಂಡಾಗ ಅಲ್ಲೇ ಪಕ್ಕದಲ್ಲಿ ಕೂತಿರೋರು ನಮ್ಮನ್ನ ನೋಡಿ ಒಂದು ಸಣ್ಣ Smile ಮಾಡ್ತಾರೆ... ಕೇವಲ ಆ ಒಂದು ನಗು ಸಾಕಾಗಿ ಹೋಗುತ್ತೆ ಸ್ನೇಹಕ್ಕೆ... ಮೊದಲೆ ಭಯ ಆವರಿಸಿರೋ ಮನಸ್ಸಿಗೆ ಆ ಸಣ್ಣ ನಗು "ನಾನಿದ್ದೀನಿ Every Thing Will Be All Right" ಅನ್ನೋ ಒಂದು ಸಂದೇಶನಾ ಕೊಟ್ಟಿರುತ್ತೆ..!! ಅಲ್ಲಿಂದ ಶುರುವಾಗೋ ಅವರ ಗೆಳೆತನ ದಿನಗಳು ಉರುಳಿದ ಹಾಗೆ ಜೀವಕ್ಕೆ ಜೀವ ಕೊಡೋ Friends ಆಗಿ ಹೋಗ್ತಾರೆ..!! ಇಂಥ ಸ್ನೇಹಕ್ಕೆ ಒಂದು ನಮನ ಸಲ್ಲಿಸಲೇಬೇಕಲ್ವ...




ಸ್ನೇಹದ ಇನ್ನು ಒಂದು ಅತಿ ವಿಶಿಷ್ಠವಾದ ಗುಣ ಅಂದ್ರೆ ಇದಕ್ಕೆ ಯಾವುದೇ ವಯಸ್ಸಿನ ಅಂತರ ಬೇಕಾಗಿಲ್ಲ.. ಇದಕ್ಕೊಂದು Best Example ಅಂದ್ರೆ ಒಬ್ಬ ಹುಡುಗ ದಿನ Walkingಗೆ ಅಂತಾ Parkಗೆ ಹೋಗುತ್ತಿದ್ದಾಗ ಆಕಸ್ಮಾತಾಗಿ ಯಾರೋ ಒಬ್ಬ ಇಳಿ ವಯಸ್ಸಿನ ಮುದುಕನ ಪರಿಚಯ ಆಗುತ್ತೆ... ಹಾಗೆ ಆಕಸ್ಮಿಕವಾಗಿ ಆದ ಅವರ ಪರಿಚಯ ಅವರಿಬ್ಬರ ನಡುವಿನ ವಯಸ್ಸಿನ ಅಂತರವನ್ನು ತೊಡೆದು ಹಾಕಿ ಬೃಹತ್ ಸ್ನೇಹದ ಸೇತುವೆಯನ್ನೇ ನಿರ್ಮಿಸಿ ಬಿಡುತ್ತೆ... ಕೇವಲ 18 ವರ್ಷದ ಹುಡುಗನಿಗೆ 70'ತರಾ ಆ ಮುದುಕ ತುಂಬಾ ಹತ್ತಿರದ Friend ಆಗಿ ಹೋಗ್ತಾನೆ...  ಅವರ ಕಷ್ಟ, ಸುಖ, ಮನಸ್ಸಿನ ಒಂಟಿತನದ ನೋವನ್ನ ಹಂಚಿಕೊಳ್ಳೋದರ ಜೊತೆಗೆ ಇವನ ತಿಳುವಳಿಕೆ ಇಲ್ಲದ ಮನಸ್ಸಿಗೆ ಆ ಹಿರಿ ಜೀವ ತನ್ನ Experience` ಮೂಲಕ ಅವನನ್ನ ಉತ್ತಮ ವ್ಯಕ್ತಿಯನ್ನಾಗಿ ಮಾಡೋಕೆ ಪ್ರಯತ್ನ ಮಾಡುತ್ತೆ.., ನಿಜಕ್ಕೂ ಇದು Great ಅನ್ಸಲ್ವಾ..? ಹಾಗೆ ಹುಡುಗನಿಗೇನೋ ಕೆಲಸ ಬಂದು 1 ದಿನ Walkಗೆ ಹೋಗಿಲ್ಲಾ ಅಂದ್ರೆ.., ತಕ್ಷಣವೇ ಆ ಹಿರಿ ಜೀವ ಒಂದು Call ಮಾಡಿ "ನಿನ್ನನ್ನು ಇವತ್ತು ನೋಡದೆ ಯಾಕೋ ಮನಸ್ಸು ತುಂಬಾ ಚಡಪಡಿಸಿ ಬಿಡ್ತು ಮಗು" ಅಂದಾಗ ಆ ಹುಡುಗನ ಕಣ್ಣಲ್ಲಿ ನೀರೇ ಬಂದು ಬಿಡುತ್ತೆ..!! ಇದಲ್ವಾ Friendship ಅಂದ್ರೆ...


ಏನ್ ಹೇಳ್ತಿರಾ ಇಂಥಾ ಸಂಬಂಧಕ್ಕೆ..??




ಇನ್ನು ಈ Friendship ನಲ್ಲಿ ಅತಿ ವಿಶೇಷವಾಗಿ ಕಾಣೋದು ಹುಡುಗ-ಹುಡುಗಿಯ ನಡುವಿನ ಸ್ನೇಹ..! ಮೊದಲೆ ಹೇಳಿದ ಹಾಗೆ ಸ್ನೇಹಕ್ಕೆ ಲಿಂಗ ಭೇದ ಇಲ್ಲಾ... ಯಾರೋ, ಎಲ್ಲೋ ಪರಸ್ಪರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುತ್ತಾ ತುಂಬಾ ಹತ್ತಿರವಾಗಿ ಹೋಗ್ತಾರೆ... ತನ್ನೊಡಲ ನೋವನ್ನೆಲ್ಲಾ ಅವನ ಜೊತೆ ಹೇಳಿಕೊಂಡು ಮನಸಾರೆ ಅತ್ತು ಬಿಡೋ ಹುಡುಗಿ.., ನೊಂದಿರೋ ಆ ಮನಸ್ಸನ್ನ ಸಂತೈಸಿ, ಸಾಂತ್ವನ ಹೇಳೋ ಹುಡುಗ.., ತುಂಬಾ ವಿಶಿಷ್ಠವಾಗಿ ಕಾಣ್ತಾರೆ... ತನ್ನ ಸುತ್ತಾ ಸಾಕಷ್ಟು ಗೆಳೆಯರ ಗುಂಪೇ ಇದ್ದರೂ ಕೂಡ ಅವಳೊಬ್ಬಳೂ "ಗೆಳತಿ" ಅವನಿಗೆ ವಿಶೇಷವಾಗಿ ಕಾಣಿಸೋಕೆ ಶುರುವಾಗ್ತಾಳೆ... ಮನೆಗೆ ಹೊರಡುವಾಗ ಅವಳಿಗೊಂದು Message ಮಾಡ್ತಾನೆ.., ತಕ್ಷಣ ಆ ಕಡೆಯಿಂದ ಒಂದು ಉತ್ತರ "Ride Bike Safely... Take Care"... ಇವನು ಇನ್ನು ಮನೆ ತಲುಪಿ Mobile ನೋಡುವಷ್ಟರಲ್ಲಿ ಇನ್ನೊಂದು Message ಬಂದಿರುತ್ತೆ "Have U Reached Home Safely"... ಅದನ್ನ ನೋಡಿದ ಆ ಹುಡುಗನ ಮುಖದಲ್ಲಿ ಒಂದು ರೀತಿಯ ಮಂದಹಾಸ..!! ಹೀಗೆ ಆರಂಭವಾದ ಸ್ನೇಹ ಪ್ರೀತಿಯಾಗಿ ಬದಲಾದರೂ ಆಶ್ಚರ್ಯ ಪಡಬೇಕಾಗಿಲ್ಲ... Also ಪರಸ್ಪರ ತಿಳಿದುಕೊಂಡಿರೋರು ಬಾಳಸಂಗಾತಿಗಳಾಗೋದರಲ್ಲಿ ತಪ್ಪೇನಿಲ್ಲಾ ಅಲ್ವಾ..? Even ಸ್ನೇಹ ಅನ್ನೋದು ಪ್ರೀತಿಯ ಇನ್ನೊಂದು ಮುಖ ಅಂತಾ ಬೇಕಾದ್ರು ಹೇಳಬಹುದು..!!




ಹಾಗೆ ಕಾಣದೆ ಇದ್ದರೂ ಕೂಡ ಮನಸ್ಸಿಗೆ ಹತ್ತಿರವಾಗೋ Internet ಸ್ನೇಹ  ತುಂಬಾ ವಿಶೇಷವಾದದ್ದು..!! ಇತ್ತೀಚಿನ ದಿನಗಳಲ್ಲಿ ಈ Social Networks ಪ್ರಭಾವದಿಂದ Friends Circle ತುಂಬಾ ದೊಡ್ಡಾದಾಗ್ತಾ ಇದೆ... ಪರಸ್ಪರ ನೋಡದೆ ಇದ್ದರೂ ಕೂಡ ಯಾವುದೋ ಒಂದು ಮೂಲೆಯಲ್ಲಿ ಇರೋ ವ್ಯಕ್ತಿಯಾ ಕಷ್ಟವನ್ನ, ಮನಸ್ಸಿನ ನೋವನ್ನ ಅರ್ಥ ಮಾಡ್ಕೊಂಡು ಅವರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸೋ ಮೂಲಕ ನೊಂದಿರೋ ಆ ಮನಸ್ಸಿಗೆ ಸಾಂತ್ವನ ಹೇಳಿ.., ಸಂತೈಸೋಕೇ ಪ್ರಯತ್ನ ಮಾಡ್ತಾ ಅದೆಷ್ಟೋ ಮೈಲಿಗಳ ಅಂತರದಲ್ಲಿದ್ದರೂ ಕೂಡ ಮನಸ್ಸಿಗೆ ಹತ್ತಿರವಾಗೋಗಿ ಬಿಡ್ತಾರೆ... ಹೀಗೆ ಇಲ್ಲಿ ಅನಿರೀಕ್ಷಿತವಾಗಿ ಹುಟ್ಟೋ ಸ್ನೇಹ ಅಣ್ಣ-ತಂಗಿ.., ಅಕ್ಕ-ತಮ್ಮ ಹೀಗೆ ಅದೆಷ್ಟೋ ಸಂಬಂಧಗಳನ್ನ ಹುಟ್ಟಿ ಹಾಕುತ್ತೆ...  ಇಂಥ ಸ್ನೇಹಕ್ಕೊಂದು Hats Off ಹೇಳಲೇಬೇಕಲ್ವಾ..??




ಹೀಗೆ ಸ್ನೇಹ ಅನ್ನೋದು ನಾನಾ ಅರ್ಥದಲ್ಲಿ ಪ್ರತಿನಿತ್ಯ ನಮಗೆ ಕಾಣಸಿಗುತ್ತೆ.., ಆದರೂ ಎಲ್ಲಾ ಅರ್ಥಗಳಿಗೂ ಮೀರಿದ್ದು ಈ ಸ್ನೇಹ ಅಂದ್ರೆ ತಪ್ಪಿಲ್ಲಾ... ಮಾತು ಅರ್ಥವಾಗೋದು ಸಾಮಾನ್ಯರಿಗಾದರೆ.., ನಾವು ಹೇಳದೆ ನಮ್ಮ ಮೌನವನ್ನ ಅರ್ಥ ಮಾಡಿಕೊಳ್ಳೋ ಶಕ್ತಿ ಗೆಳೆತನಕ್ಕೆ ಇರುತ್ತೆ.. ಹಾಗೆ ಎಲ್ಲೋ ಒಂದು ಗಳಿಗೆಯಲ್ಲಿ ಅವರ ಮಡಿಲಲ್ಲೋ, ಭುಜದ ಮೇಲೋ ತಲೆಯಿಟ್ಟು ಮಲಗಿದಾಗ "ಅಮ್ಮನ" ತರ ಅನ್ನಿಸಿದರೂ ಅದರಲ್ಲಿ ಏನೂ ಆಶ್ಚರ್ಯವಿಲ್ಲಾ... ಇಂತಹ ಆತ್ಮೀಯ ಗೆಳೆತನಕ್ಕೊಂದು ಪ್ರೀತಿಯ ನಮನ ಸಲ್ಲಿಸಲೇಬೇಕಲ್ವಾ..??



"ಕೊಡುವುದು ಬೇಡ ಜೀವಕ್ಕೆ ಜೀವ..
ಹಂಚಿಕೊಂಡರೆ ಸಾಕು ನನ್ನೊಡಲ ನೋವ"

Thursday 15 September 2011

ಸುರಿವ ಮಳೆ ಜೊತೆಯೊಂದಷ್ಟು ಕಾಡುವ ನೆನಪುಗಳು..!

ಮತ್ತದೆ ಮಳೆ.., ಮತ್ತದೆ ನೆನಪುಗಳು..!
ಹೌದು ಮಳೆ ಅಂದ್ರೆನೇ "ಬೆಂಬಿಡದೆ" ಕಾಡುವ ನೆನಪುಗಳ 'ಮೆರಮಣಿಗೆ'..! ಮಳೆ ಬಂತೆಂದರೆ ಸಾಕು.., ಮನಸ್ಸಿನಲ್ಲಿ ನೆನಪುಗಳ "ಜಡಿ ಮಳೆನೇ" ಶುರುವಾಗುತ್ತೆ..! 'ನೆನಪುಗಳಿಗೇನು ಬರಲಿಕ್ಕೊಂದು ಕಾರಣ ಬೇಕಷ್ಟೆ'..!


ಒಂಟಿತನದ ಸಂಜೆ.., ಮನಸ್ಸಿನಲ್ಲೆನೋ ಒಂದು ರೀತಿ "ನೀರವ ಮೌನ..!" ಭಾರೀ ಮಳೆಯ 'ನೀರಿಕ್ಷೆ' ಎಂಬಂತೆ ಕಿಟಕಿಯಿಂದ ಬೀಸುತ್ತಿರುವ 'ತಂಗಾಳಿ' ಬಂದು "ಮೈ ಸೋಕಿದಾಗ" ಏನೋ ಒಂದು ರೀತಿಯ 'ರೋಮಾಂಚನ..!' ನನ್ನ ಮನಸ್ಸು ಕೂಡ "ಅರಳತೊಡಗಿತು"... ಎದ್ದು ನೋಡಲು ಮನಸ್ಸಿಲ್ಲದಿದ್ದರೂ 'ಆ ತಂಗಾಳಿಗೆ' ಮನಸೋತ ಮನಸ್ಸು.., ಎದ್ದು ಹೋಗಿ ಕಿಟಕಿಯ ಬಳಿ ನಿಂತಾಗ ಅದಾಗಲೇ "ಮಳೆ ಹನಿಗಳು" ಧರೆಯನ್ನು 'ಮುತ್ತಿಕ್ಕತೊಡಗಿದ್ದವು..!' ಆ ಸೋನೆ ಮಳೆ ಮತ್ತು ತಂಗಾಳಿಗೆ ಸೋತ ಮನಸ್ಸು ಒಂದೊಂದಾಗಿ ನೆನಪುಗಳ ಬೆನ್ನೇರತೊಡಗಿತು..!





ಈ ಮಳೆನೇ ಹಾಗೆ ಮಣ್ಣಿನ ವಾಸನೆ ಮೂಗನ್ನು.., ತಂಗಾಳಿಯೊಂದಿಗೊಂದಷ್ಟು ನೆನಪನ್ನು ಹೊತ್ತು ತರುತ್ತೆ... ಹಾಗೆ ಮಳೆಯ ಯಾವುದೋ ಒಂದು ಗುಂಗಿನಲ್ಲಿ 'ಹಿಂದೆ' ಕಳೆದ ಜೀವನ ನೆನಪಿಸಿಕೊಂಡಾಗ "ಕಣ್ಣಂಚಿನಲ್ಲಿ ತುಂಬಿದ ನೀರು" ಧಾರಕಾರವಾಗಿ ಹರಿದು ಮತ್ತೆ "ಮನಸ್ಸಿನಲ್ಲೊಂದು ರೀತಿ ಮೋಡ ಆವರಿಸುತ್ತೆ..!"


ಮಳೆ ಅಂದ ತಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ಯಾವುದಾದರೊಂದು ನೆನಪು ಸಹಜವಾಗಿನೇ ಕಣ್ ಮುಂದೆ ಬಂದು ಹೋಗುತ್ತೆ..! ಒಂದು ರೀತಿಲೀ ಹೇಳಬೇಕು ಅಂದ್ರೆ 'ಈ ಮಳೆ ನಮ್ಮ ಅಂತರಾಳವನ್ನು ಬಿಂಬಿಸುತ್ತೆ..!' ಕೆಲವೊಂದು ಸಲ ಓಡಿ ಹೋಗಿ ಮಳೆಯಲ್ಲಿ ನೆನೆದು.., ಮನಸ್ಸಿನ ಭಾರವೆಲ್ಲಾ ಕಳೆದು ಬಿಡೋಣ ಅನ್ಸುತ್ತೆ... ಹಾಗೆ ಕೆಲವೊಂದು ಸಲ ಮನದಾಳದ ಮಾತನೆಲ್ಲಾ ಮಳೆರಾಯನಿಗೆ ಕೇಳುವಂತೆ ಹೇಳಿ ಅಳುವುದು ಉಂಟು..!


ಬಹು ದಿನಗಳ ನೋವಿಗೆ ಸಿಕ್ಕ 'ಬಿಡುಗಡೆಯಂತೆ' ಹೊರಗೆ ಜುರ್ರೋ ಎಂದು ಸುರಿಯುತ್ತಿರುವ ಮಳೆ... ಹಾಗೆ ಸುರಿದ ಮಳೆ ನೆಲವನ್ನು ಅಪ್ಪಿ ಚಿಮ್ಮುತ್ತಿದ್ದಂತೆ ನೆನಪಿನ ಪುಟಗಳು ಒಂದೊಂದಾಗಿ ಬಿಚ್ಚಿಕೊಳ್ಳಲು ಶುರುವಾಯ್ತು..!


ಒಂದು ಮಳೆ ಈ ಪರಿಯಾಗಿ ಮನಸ್ಸನ್ನು ಕಾಡುತ್ತಾ..?
ಮಳೆ ಬಂದರೆ ಭಾವನೆಗಳು.., ಹಳೆ ನೆನಪುಗಳು ಮರುಕಳಿಸುತ್ತಾ..?
ಖಂಡಿತ ಹೌದು..!
ಮನಸ್ಸು ಮಳೆಯಲ್ಲಿ ಈ ಪರಿಯಾಗಿ ಪರಿತಪಿಸುತ್ತೆ ಅಂತಾ ಗೊತ್ತಾಗಿದ್ದು ಇದೇ ಮಳೆಯಿಂದಾನೇ..!



ಈ ಪ್ರೀತಿಗೂ.., ಮಳೆಗೂ ಏನೋ ಒಂದು ರೀತಿಯ ಅವಿನಾಭಾವ ಸಂಬಂಧ ಇದೆ... ಪ್ರೀತಿಗೆ ಮಳೆ ಬೇಕು.., ಹಾಗೆ ಆ ಪ್ರೀತಿಯಿಂದಾದ ನೋವಿಗೂ ಕೂಡ ಮಳೆನೇ ಬೇಕು..!
ಸುರಿಯುತ್ತಿರುವ ರಾಶಿ ರಾಶಿ ಮಳೆಹನಿಗಳ ಜೊತೆ ಜೊತೆಯಲ್ಲೆ ಮನಸ್ಸಿನಲ್ಲಿ ಅಡಗಿರೋ ನೋವಿನ ಮೋಡವನೆಲ್ಲಾ ಕಣ್ಣೀರಾಗಿ ಕರಗಿಸಿ ತನ್ನೊಡಲಿಗೆ ಸೇರಿಸಿಕೊಂಡುಬಿಡೋ ಬಯಕೆ ಈ ಮಳೆಗೆ..!
ಹಾಗೆ ಮಳೆ ಬಂದಾಗೆಲ್ಲಾ ಈ ಮನಸ್ಸಿನಲ್ಲಿ ಅಚ್ಚಳಿಯದೇ ನಿಲ್ಲೋದು ಒಂದೆ.., ನಿನ್ನ ಪ್ರೀತಿ ತುಂಬಿದ ನೆನಪು ಮಾತ್ರ..! ಧಾರಾಕಾರವಾಗಿ ಸುರಿದು ಒಮ್ಮೇಲೆ ನಿಂತು ಹೋಗೋ ಮಳೆಯ ಹಾಗೆ ಕೇಳದಿದ್ದಾಗ ಬೆಟ್ಟದಷ್ಟು ಪ್ರೀತಿ ಚೆಲ್ಲಿ.., ಬೇಕೆನಿಸಿದಾಗ ಒಂದು ಹನಿಯನ್ನು ನೀಡದೆ ಕಣ್ಮರೆಯಾಗಿ ಹೋದೆಯಲ್ಲಾ.., ಅದರ ಗುರುತು ಈ ಮನದಲ್ಲಿ ಅಚ್ಚಾಗಿ ಉಳಿದು ಬಿಡುತ್ತದೆಯೆಂಬಾ ಕನಿಷ್ಠ ಕಲ್ಪನೆನೂ ಕೂಡ ನಿನಗಿಲ್ಲವಾಗಿ ಹೋಯಿತಾ ಹುಡುಗ..!
ಈ ಬದುಕಿನಲ್ಲಿ ಭಾವನೆಗಳ ಮಳೆ ಸುರಿದು ನಿಂತು ಹೋದ ಮೇಲೆ ತೊಟ್ಟಿಕುವ ಹನಿಗಳಂತೆ ನಿನ್ನ ನೆನಪು ಕೂಡ ಸದಾ ಇರುತ್ತೆ..! ಕೊನೆಯದಾಗಿ ಈ ಮಳೆ ಬಂದಾಗಲೆಲ್ಲಾ ನಿನ್ನ ನೆನಪು ಬರುವುದು ಯಾಕೆ ಎಂಬ ಪ್ರಶ್ನೆ.., ಈ ಮನದಲ್ಲಿ ಇನ್ನು ಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ... ಉತ್ತರ ನಿನಗೇನಾದರೂ ಗೊತ್ತಿದ್ದರೆ ಕನಸಿನಲ್ಲಾದರೂ ಒಮ್ಮೆ ಬಂದು ತಿಳಿಸಿ ಬಿಡು..!:-(



ಯಾಕೋ ಈ ಮಳೆ ನನ್ನನ್ನು ಬಿಡದಂತೆ ಗಟ್ಟಿಯಾಗಿ ಅಪ್ಪಿಕೊಂಡು ಬಿಟ್ಟಿದೆ ಅನ್ನಿಸಿ.., ಎಡಬಿಡದೆ ಬರುತ್ತಿದ್ದ ನೆನಪುಗಳಿಗೆ ಸ್ವಲ್ಪ Break ನೀಡಿ ವಾಸ್ತವಕ್ಕೆ ಬಂದಾಗ "ಮಳೆ ನೋಡುತ್ತಾ ಕಿಟಕಿಯ ಮುಂದೆ ನಿಂತಿದ್ದ ನನಗೆ ಮಳೆ ನಿಂತಿದ್ದು ಅರಿವಿಗೆ ಬಂದಿರಲಿಲ್ಲ..!" ಮಳೆ ಅದಾಗಲೆ Good Bye ಹೇಳಿ ಆಗಿತ್ತು... ಮಳೆ ನಿಂತಿದೆ... ಆದರೆ ಮಳೆಯ ನೀರಿನಿಂದಾಗಿ ಅಂಗಳದ ಮಣ್ಣೆಲ್ಲಾ ಒದ್ದೆ ಒದ್ದೆ.., ಹಾಗೆ ಮನಸ್ಸು ಕೂಡ..! ಮಣ್ಣಿನಾ ಜೊತೆಗೆ ಮನಸು ಕೂಡ ಒಣಗಿ ಗಟ್ಟಿಯಾಗಬೇಕು ಅಂದ್ರೆ.., ಕನಿಷ್ಠ ಇನ್ನೆರಡು ದಿನಗಳಾದರೂ ಬೇಕು... ಅದೂ ಮತ್ತೊಮ್ಮೆ ಮಳೆ ಬಾರದಿದ್ದರೆ..!

Saturday 3 September 2011

ಮೌನ ಮಾತಾದಾಗ..!!

ನನ್ Lifeನಲ್ಲಿ ಈ ರೀತಿಯ ದಿನಗಳು ಕೂಡ ಬರುತ್ತೆ ಎಂದು ನಾನು ಯಾವತ್ತು Expect ಮಾಡಿರಲಿಲ್ಲ... ಮನಸ್ಸಿಗೆ ಹತ್ತಿರವಾದವರೆ ಕೊನೆಗೆ ಹೀಗೆ ಯಾವ ಸುಳಿವನ್ನು ಕೊಡದೆ ದೂರ ಹೋಗ್ತಾರೆ ಅಂತಾನೂ Think ಮಾಡಿರಲಿಲ್ಲ...! ಆದರೆ ನೋಡು ನೋಡ್ತಿದಂತೆ ಕಣ್ಮುಂದೆನೇ ಎಲ್ಲವೂ ನಡೆದು ಹೋಯ್ತು... ಕೊನೆಗೇ ನನ್ನದು ಅಂತಾ ನನಗಾಗಿ ನನ್ ಜೊತೆ ಉಳಿದುಕೊಂಡಿದ್ದು ಬರೀ ಮೌನ, ಒಂಟಿತನ, ಬೇಸರ ಮಾತ್ರ...!




ಪ್ರತಿಯೊಬ್ಬರು ಅವರ Lifeನಲ್ಲಿ ಹಲವು ರೀತಿಯ ನೋವು, ಯಾತನೆಗಳನ್ನ ಅನುಭವಿಸ್ತಾನೇ ಇರ್ತಾರೆ ಅದಕ್ಕೆ ನಾನೂ ಹೊರತಲ್ಲ...! "ಸಾವಿಲ್ಲದ ಮನೆಯಿಲ್ಲ" ಎಂಬಂತೆ "ನೋವಿಲ್ಲದ ಮನಸ್ಸಿಲ್ಲ" ಅಂತಾ ಹೇಳಬಹುದು... ದೇಹಕ್ಕೆ ಆಗೂ ನೋವನ್ನ ಹೇಗಾದರೂ ಸಹಿಸಬಹುದು ಆದರೆ ಈ ಮನಸ್ಸಿಗಾಗೋ ನೋವನ್ನ ಸಹಿಸೋದು ಅಷ್ಟು ಸುಲಭವಾದ ಮಾತಲ್ಲ ಅಲ್ವಾ..!!



ನಾನು ಪುಟ್ಟ ಮನಸಿನ ಹುಚ್ಚು ಹುಡುಗಿ... ಕನಸುಗಳನ್ನ ಕಾಣ್ತಾ ಅದರ ಜೊತೆನೇ ಬದುಕ್ತಾ ಇರ್ತೀನಿ... ಹಾಗೆ ಕಂಡ ಕನಸುಗಳಲ್ಲಿ ನನಸಾದವು "ಕೆಲವು", ಕಣ್ಣೀರಲ್ಲೆ ತೊಳೆದು ಹೋದಂತವು "ಹಲವು"...


ಪ್ರತಿಯೊಬ್ಬರ ಜೀವನದಲ್ಲೂ ಎಲ್ರೂ ಇರ್ತಾರೆ... Family, Friends, ಬಂಧುಗಳು ಹೀಗೆ ಬಂದು "ಹೋಗುವವರ" ದೊಡ್ಡ List ಇರುತ್ತೆ... ಆದರೂ ಒಮ್ಮೊಮ್ಮೆ ಈ ತರ ಒಂಟಿತನ ಅನ್ನೋದು ಎಲ್ಲರನ್ನು ಒಂದಲ್ಲ ಒಂದು Situation ನಲ್ಲಿ ಸಹಜವಾಗಿನೇ ಕಾಡುತ್ತೆ...!!


ಹಾಗೆ ಕೆಲವೊಂದು ಸಲ ಅದೇ ಒಂಟಿತನ'ನೇ ಮನಸ್ಸಿಗೆ ತುಂಬಾ ಹತ್ತಿರವಾಗಿ ಬಿಡುತ್ತೆ...! ನಮ್ಮನ್ನ ಸರಿಯಾಗಿ ಅರಿಯದೆ ಹೋದವರು And ಅರಿಯಲು ಪ್ರಯತ್ನಿಸುತ್ತಿವವರಿಗಿಂತ ಒಂಟಿತನವೇ ಮೇಲು ಅನ್ಸೊಕೆ ಶುರುವಾಗಿ ಬಿಡುತ್ತೆ...! Finally ಒಂಟಿತನವೇ ನಮಗಾಗಿ ಉಳಿದಿರೋ Friend ಅನ್ನಿಸಿ.., ಕತ್ತಲ ಜೊತೆಗೆ ಮಾತಿಲ್ಲದ ಸಂವಾದ ನಡೆಸುತ್ತಾ.., ದುಃಖ ಹೊರ ಹೊಮ್ಮಿದಾಗ ಜೊತೆಯಾಗಿ ಹೊರ ಬರುವ ಭಾವಾತ್ಮಕ ಕಣ್ಣಾ ಹನಿಯಾ ಜೊತೆಗೆ ಪಿಸುಗುಡುವ ಮನದ ಮಾತುಗಳನ್ನ ಕೇಳಲು ನಿಶಬ್ಧವಾಗಿ ನಿಲ್ಲೋ ಹೃದಯದ ಬಡಿತವೇ ಮನಸ್ಸಿಗೆ ಪ್ರಿಯವಾಗಿ.., ಕೊನೆಗೆ ಈ ಮೌನ, ಒಂಟಿತನ ಮತ್ತ್ ಅದೇ ಬೇಸರನೇ ಇಷ್ಟವಾಗ್ತಾ ಹೋಗ್ಬಿಡುತ್ತೆ...!!


ಇದನೆಲ್ಲಾ ನೋಡಿದಾಗ ಒಂಟಿತನ And ತಮಗ್ಯಾರು ಇಲ್ಲಾ ಎಂಬ ಭಾವಕ್ಕಿಂತ ಅತಿಯಾದ ಬಡತನ ಬೇರೆ ಯಾವುದು ಇಲ್ಲಾ ಅಂತಾ "ಮದರ್ ತೆರೇಸಾ" ಅವರು ಹೇಳಿರೋದು ಎಷ್ಟು ನಿಜ ಅನ್ಸುತ್ತೆ ಅಲ್ವಾ..!



ಏನೇ ಆದರೂ ಬೇಸರವಾದಾಗ ತಲೆ ನಿಮಿರಿಸಿ ಸಮಾಧಾನ ಮಾಡುವ "ತೊಡೆ".. ಹೆಗಲಿಗೆ ಹೆಗಲು ಕೊಟ್ಟು ಧೈರ್ಯ ತುಂಬುಲು ಒಂದು "ನುಡಿ".. ಬೇಜಾರಾದಾಗ ಗಂಟೆಗಟ್ಟಲೆ ಮಾತಾಡಲು ಮತ್ತು ಮನಸ್ಸಿನ ಇಷ್ಟ, ಕಷ್ಟಗಳನ್ನ ಹಂಚಿಕೊಳ್ಳಲು ಒಂದು "ಜೀವ".. ನೊಂದ ಮನಸ್ಸಿಗೆ ಸಾಂತ್ವನ ಹೇಳೋಕೆ ಒಂದು "ಮನಸು".. ಜೊತೆಗೆ ಇದ್ದಿದ್ರೆ ಈ ಜೀವನನೂ ಎಷ್ಟೋ ಚೆನ್ನಾಗಿರುತಿತ್ತು ಅನ್ನಿಸುತ್ತೆ..!!


ಇಷ್ಟೆಲ್ಲದರ ನಡುವೆನೂ ಕಳೆದು ಕೊಂಡದ್ದನ್ನ ಹುಡುಕುವ ವ್ಯರ್ಥ ಪ್ರಯತ್ನಕ್ಕಿಂತ, ಉಳಿದುಕೊಂಡಿರೋದ್ದನ್ನೇ ಕಾಪಾಡಿಕೊಂಡು ಹೋಗೋದು Better ಅಂತಾ ತಿಳ್ಕೊಂಡು ನನ್ ಮನಸ್ಸನ ನಾನೇ ಸಮಾಧಾನ ಮಾಡ್ಕೊತೀನಿ..!!

But ಒಂದೊಂದು ಸಲ ಮನಸ್ಸಿಗೆ ತುಂಬಾ ಬೇಜಾರಾದಾಗ... ದುಃಖಕ್ಕಿಂತ "ದುಗುಡನೇ" ಹೆಚ್ಚಾದಾಗ.., ಅಳುವಿಗಿಂತ "ಅಳುಕೇ" ಮೇಲಾದಾಗ.., ಹೀಗೆ ಮೌನವೇ ಮಾತಾಗಿ ಹೊರ ಬರುತ್ತೆ..!!