ಪ್ರೀತಿಯಿಂದ ದೀಪು..!

♥ನನ್ನ ಬಗ್ಗೆ ಹೇಳೋಕೆ ನೂರೆಂಟು ಮಾತುಗಳು ತುಟಿಯಲ್ಲಿ ನಿಂತಿವೆ... ಆದರೆ ಯಾಕೋ ಕಾಣೆ ನನ್ನಾಣೆ ಮಾತುಗಳು ಮೌನದಲ್ಲಿ ಸಿಲುಕಿವೆ..!♥

♥So, ಏನೂಂತ ಹೇಳ್ಲಿ ನನ್ನ ಬಗ್ಗೆ ನಾನು...♥

♥ಕತೆ, ಕವನ ಬರಿಬೇಕು ಅನ್ನೋ ಆಸೆ ನನಗೂ ಇದೆ... ಆದ್ರೆ ಈ ಹಾಳಾದ್ ತಲೆಗೆ ಏನೂ ವಿಷಯನೇ ಹೊಳೆಯೋದಿಲ್ಲ... ಹಾಗಂತ ಸುಮ್ಮನೆ ಇರೋಕೆ ಮನಸು ಒಪ್ತಾ ಇಲ್ಲಾ...♥

♥ಅಂದ ಹಾಗೆ ನಿಮಗೆ ನನ್ನ ಪರಿಚಯ ಮಾಡ್ಲೆ ಇಲ್ಲ ಅಲ್ವಾ...?♥

♥ನನ್ನ ಬಗ್ಗೆ ಅಂತಾ ಹೇಳಿಕೊಳ್ಳುವಂತಾದ್ದು ಏನಿಲ್ಲ... ಹೆಚ್ಚು ಕಮ್ಮಿ ಇನ್ನು ನನ್ನ ಕಲ್ಪನೆಗಳಿಗೆ, ಭಾವನೆಗಳು ಸಿಗದೆ ಒದ್ದಾಡುತ್ತಿರೋ ಮನಸು ನನ್ನದು... ಅಂಥದ್ದರಲ್ಲಿ ಅದನ್ನು ಹಿಡಿದು ಅರ್ಥ ಮಾಡ್ ಕೊಳ್ಳದೆ, ನನ್ನ ಬಗ್ಗೆ ನಿಮ್ ಮುಂದೆ ನಾನು ಹೇಗ್ ಹೇಳ್ಲಿ?? ಏನ್ ಹೇಳ್ಲಿ??♥

♥ಆದ್ರೂ ನಿಮ್ಗೆ ಬೇಜಾರಾಗಬಾದ್ರು ಅಂತ ನನ್ ಬಗ್ಗೆ ನನಗೆ ಗೊತ್ತಿರೋ ಅಲ್ಪಾ, ಸ್ವಲ್ಪಾ ವಿಷಯ ಹೇಳ್ತಿನಿ ಕೇಳಿ... Sorry ಓದಿ...!!♥

♥ನನ್ನ ಹೆಸರು ದೀಪಾ.... ಆದ್ರೆ ಎಲ್ರೂ ನನ್ನ ಪೀತಿಯಿಂದ ದೀಪು ಅಂತಾರೆ... And ಹಾಗೇ ಕರೆದರೇನೆ ನನ್ಗೆ ಇಷ್ಟ ಆಗೋದು...♥

♥ಹುಟ್ಟಿದು... ಬೆಳೆದಿದ್ದು ಎಲ್ಲಾ ಮೈಸೂರಿನಲ್ಲಿನೇ... ಓದಿದ್ದು BBM... ಆದ್ರೆ ಮಾಡ್ತಾ ಇರೋದು Interior Designing Diploma... Designing Fieldನಲ್ಲಿ ಏನಾದ್ರು ಸಾಧಿಸಬೇಕು ಅನ್ನೊ ಹುಚ್ಚು ಆಸೆ ಇದೆ...!♥

♥ಇನ್ನೂ Family ವಿಷಯಕ್ಕೆ ಬಂದ್ರೆ ಪಕ್ಕಾ Orthodox Family ನಮ್ಮದು... ತುಂಬು ಕುಟುಂಬ 14'ಜನ ಇದ್ದೀವಿ... ಅಪ್ಪಾ And Family ಬಗ್ಗೆ ತುಂಬಾ ಗೌರವ ಮತ್ತೆ ಪ್ರೀತಿ ಇದೆ...! ತಮ್ಮ ಅಂದ್ರೆ ಬಲು ಇಷ್ಟ... ಹಾಗಂತ ತಂಗಿಯರು ಇಷ್ಟ ಇಲ್ಲ ಅಂತಾ ಅಲ್ಲಾ...!♥

♥ಇನ್ನೂ Friends ಜೊತೆ ಹರಟೆ ಹೊಡ್ಕೊಂಡು... ಎಲ್ರೂನು, ನಗುಸ್ತಾ, ನಗ್ತಾ... ಯಾವಾಗಲೂ Happy ಆಗಿ ಇರೋ ಸ್ವಭಾವ ನಂದು...!♥

♥ಯಾರಿಗಾದ್ರು ಒಳ್ಳೆದು ಮಾಡಬೇಕು ಅನ್ನೋ ಪರಿಶುದ್ದ ಮನಸು ಇದೆ... ಹಾಗೆ ಇನ್ನೊಬ್ಬರ ಮನಸನ್ನು ನೋಯಿಸಬಾದ್ರು ಅನ್ನೋ ಪಾಠನೂ ಕಲಿತ್ತಿದ್ದೀನಿ...!♥

♥ಸದಾ ಕನಸುಗಳಾ ಜೊತೆನೇ ಜೀವಿಸ್ತಾ ಇರ್‍ತೀನಿ...
ಭಾವನೆಗಳ ಜೊತೆ ಬದುಕ್ತಾ ಇರೋ ಭಾವಾನಾ ಜೀವಿ... ಆದ್ರೆ ಆ ಭಾವನೆಗಳೆ ನನ್ ಅತಿ ದೊಡ್ಡ ದೌರ್ಬಲ್ಯ ಅಂದ್ರೆ ತಪ್ಪಿಲ್ಲ...!!♥

♥ಇನ್ನು ಹುಚ್ಚು ಮನಸು...
ಕಂಡದೆಲ್ಲಾ ಬೇಕು ಅನ್ನೋ ಬಯಕೆ...
ಹಾಗೆ ಪಡೆದುಕೊಂಡದ್ದನ್ನ ಜೋಪಾನವಾಗಿ ಇಡೋ ಪ್ರಯತ್ನ...!♥

ಏನ್ Lifeu ರೀ ಇದು...

♥ಇದೆಲ್ಲಾ ನೋಡಿ ತಲೆ ಕೆಡ್ತಾ ಇದ್ದೀಯಾ??
ಯಾಕಾದ್ರೂ ಓದ್ತಾ ಇದ್ದೀನೊ ಅನುಸ್ತಾ ಇದ್ದಿಯಾ??
ಇನ್ನೊಂದು ಸ್ವಲ್ಪಾ ಇದೆ ಅಷ್ಟೆ ಮುಗಿಸಿ ಬಿಡ್ತೀನಿ...
Pls ಬೇಜಾರ್ ಮಾಡ್ ಕೊಳ್ಳದೆ ಓದಿ...
And
ನೀವು ಬೇಜಾರ್ ಮಾಡ್ಕೊಂಡ್ರು ನಾನೇನು ಮಾಡೋಕಾಗಲ್ಲ ಬಿಡಿ...!♥

♥ಇಷ್ಟೆಲ್ಲಾ Busy Lifeನಾ ನಡುವೆ ಹಾಡು ಕೆಳೋದು ಅಂದ್ರೆ ಪಂಚ ಪ್ರಾಣ... ಹಾಗಂತ ನನಗೆ ತುಂಬಾ ಚೆನ್ನಾಗಿ ಹಾಡೋಕೆ ಬರುತ್ತೆ ಅನ್ಕೊಂದ್ರೆ ಅದು ನಿಮ್ ಭ್ರಮೆ ಅಷ್ಟೆ...! ಇನ್ನು ಇಷ್ಟದ ಹಾಡುಗಳನ್ನ Collect ಮಾಡೋದು ಮತ್ತೊಂದು Hobby... ರಾಜು ಅನಂತಸ್ವಾಮಿ Sir Voiceನಲ್ಲಿ "ಯಾವ ಮೋಹನ ಮುರಲಿ ಕರೆಯಿತೋ ದೂರ ತೀರಕೆ ನಿನ್ನನು" Song ಕೇಳ್ತಾ ಇದ್ರೆ ಇಡೀ ಪ್ರಪಂಚನೇ ಒಂದು ಕ್ಷಣ ಮರೆತು ಬಿಡ್ತೀನಿ...!♥

♥ಹುಚ್ಚು ಹುಡ್ಗಿ ಅನ್ನಿಸ್ತಾ ಇದ್ದಿಯಾ??
ಇಷ್ಟೆ ನೋಡ್ರಿ ನನ್ ಈ ಪುಟ್ಟ ಪ್ರಪಂಚ...
ನೀವು ತುಂಬಾ ದೊಡ್ಡದೆ ಬಿಡಿ ಅನ್ಕೊಂಡ್ರೆ ಅದು ನನ್ ತಪ್ಪಲ್ಲಾ...!♥

♥ಆದ್ರೆ ಇನ್ನೊಂದು ವಿಷಯಾ ಹೇಳಲೇಬೇಕು...
ಎಲ್ರೂ ನನ್ನ ತುಂಬಾ Simple ಹುಡ್ಗಿ ಅಂತಾರೆ.. ಆದ್ರೆ ಯಾಕೆ ಅನ್ನೋದು ನನಗಂತೂ ಗೊತ್ತಿಲ್ಲ..! ನಿಮ್ಗೆ ಏನಾದ್ರೂ ತಿಳ್ಕೊಬೇಕು ಅನ್ನೋ ಆಸೆ ಇದ್ರೆ... ಹೇಳ್ತಾರಲ್ಲಾ ಅವರನ್ನೆ ಕೇಳ್ಬೇಕು...!♥

♥ಇದಿಷ್ಟೆ ನನ್ ಬಗ್ಗೆ ನನಗೆ ಗೋತ್ತಿರೋದು...
ಇದು ಬಿಟ್ರೆ ನಾನು ನಿಮ್ ಥರಾನೆ...
ಅಥವಾ ನಿಮ್ ಸುತ್ತಾ, ಮುತ್ತಾ ಇರೋ ಸಾವಿರಾರು ಹುಡುಗಿಯರ ಥರಾನೆ ನಾನು ಒಬ್ಳು ಹುಡ್ಗಿ ಅಷ್ಟೆ... ತುಂಬಾ Simple... ನಿಮ್ ಪಕ್ಕದ್ ಮನೆ ಹುಡ್ಗಿ ಅಂತಾ ಬೇಕಾದ್ರೂ ತಿಳ್ಳೋಳಿ... ನಂದ್ ಏನೂ Objection ಇಲ್ಲಾ..!♥

Friday, 10 February 2012

ಹೋಗಿ ಬಾ ಮನವೇ.., ನಾ ಹಾರೈಸುವೆನು...


ಹೋಗಿ ಬಾ ಮನವೇ.., ನಾ ಹಾರೈಸುವೆನು...



ಬಾಳೆಂಬ ಪಯಣದಲಿ ಅರಿಯದೆ
ಜೊತೆಯಾದೆ...
ದಾರಿ ಕವಲಾಯಿತು...
ಮನಸು ಎರಡಾಯಿತು..!!

ಕಾಣದ ದೇವರ ಬಳಿ ಪ್ರತಿಕ್ಷಣವೂ
ಪ್ರಾರ್ಥಿಸುತ್ತಿರುವುದೊಂದೆ
ನಿನ್ನಾ ಸಂತೋಷ..!!

ಎಂದೂ ನಿನ್ನಾ ನೋವನ್ನು ಸಹಿಸದ.,
ಸಹಿಸಿ ಬದುಕದ
ಕಲ್ಮಷವಿರದ ಜೀವವಿದು..
ಬಯಸುತ್ತಿರುವುದೊಂದೆ
ಆರದಿರಲಿ ನನ್ನ ಹೃದಯದ ಸ್ನೇಹದ
ಪ್ರೀತಿಯ ನಂದಾದೀಪವೆಂದು..!!

ಹೋಗಿ ಬಾ ಮನವೇ.., ನಾ ಹಾರೈಸುವೆನು...

ಈ ಜೀವನದ ಮೆಟ್ಟಿಲಿನ ಬರೀ ಒಂದು
ಹಂತ ನೀನು...
ಬಾಳಲ್ಲಿ ಸಂತಸವಾ ಮರಳಿಸಲು ಬಂದ
ಸಾಮಾನ್ಯ
ಜೀವ ನಾನು..!!

ಕಳೆದು ಹೋದ ಕನಸುಗಳೆಲ್ಲಾ.,
ಕವಿಯಬಾರದು ಮನಸ್ಸನ್ನು..
ಬೆಳೆಸುವಂಥಾ ಭಾವನೆಯಲ್ಲಾ.,
ಅರಳಿ ಬೆಳೆಸಲಿ ನಿನ್ನನ್ನು..!!

ನಗುವೊಂದೇ ನಿನಗಿರಲಿ ಎನ್ನುವ
ಈ ಮನಸು..
ಪ್ರೀತಿಯಲೇ ಶುಭಕೋರುತ್ತಿದೆ...

ಹೋಗಿ ಬಾ ಮನವೇ.., ನಾ ಹಾರೈಸುವೆನು...

ಉಳಿದಿರುವೆ ಎಷ್ಟು ದಿನ ನಾನಿಲ್ಲಿ...
ಪಯಣ ಸಾಗಿದೆ..,
ಮುಂದಿನ ದಾರಿಯಲಿ..!!

ಹೋಗಿ ಬಾ ಮನವೇ.., ನಾ ಹಾರೈಸುವೆನು...






Wednesday, 1 February 2012

ನೆನಪಿನ ಪುಟಗಳ ನಡುವೆ..!!




ಎಲ್ಲಾ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ..! ಕೆ.ಎಸ್.ನಿಸಾರ್ ಅಹಮ್ಮದ್ ಅವರು ಬರೆದಿರೋ ಈ ಹಾಡನ್ನ ಕೇಳ್ತಾ ಇದ್ರೆ ಎಲ್ಲೋ ಒಂದು ಕ್ಷಣ ನಮಗಾಗಿನೇ ಬರೆದಿರಬೇಕು ಅನ್ನಿಸಿ ಬಿಡುತ್ತೆ..! ಅಷ್ಟು ಭಾವುಕರು ನಾವು..! ಹೌದು ನೆನಪುಗಳೇ ಹಾಗೆ ಮರೆತಿದ್ದೀವಿ ಅಂತಾ ಅಂದುಕೊಂಡ್ರು ಕೆಲವೊಂದು ನೆಪವಾ ಮಾಡಿಕೊಂಡು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ವೆ..! ಬೇಡವೆಂದರೂ ಬರೋ ಅತಿಥಿಗಳಾ ಹಾಗೆ..!


ನಿದ್ದೆಯಲ್ಲೂ ಸನಿಹ ಬಂದು ಬೇಡವೆಂದರೂ ಅಪ್ಪಿಕೊಂಡು ಕಾಡುವ ನೆಪಗಳೇ ಈ ನೆನಪುಗಳು.. ಕೇವಲ ನೆನಪುಗಳಷ್ಟೆ ತಾನೇ ಅಂತಾ ಬಿಟ್ಟು ಬಿಡೋಣ ಅನ್ಕೊಂಡ್ರೆ ಬೆನ್ನು ಹತ್ತಿದ ಹಳೆಯ ಸಾಲಗಾರನ ತರ ಪುನಃ ಹಿಂದಿನ ಕಡತಗಳನ್ನೆಲ್ಲಾ ತೆರೆದಿಡುತ್ತಾ ಹೋಗುತ್ತೆ..! ಹೀಗೆ ನೆನಪಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಇದ್ರೆ ಹಳೆಯ ನೆನಪುಗಳೆಲ್ಲಾ ಯಾವುದೋ ಜಿದ್ದಿಗೆ ಬಿದ್ದ ಹಾಗೆ ಒಂದರ ಮೇಲೊಂದು ನೆನಪುಗಳು ನಮ್ಮನ್ನು ಬಿಗಿದಪ್ಪಿಕೊಂಡು ಕಾಡೋಕೋ ಶುರು ಮಾಡುತ್ತಾ ಹೋಗುತ್ತೆ...! ಈ ಹಾಳಾದ ನೆನಪುಗಳ ಕೆಲಸ ಅದೇ ತಾನೆ.., ಒಂದು ಕಾಡೋದು ಇಲ್ಲಾ ಕಾಡಿಸೋದು..!

ಹಾಗೆ ಈ ನೆನಪುಗಳು ಅನ್ನೋ ವಿಷಯಾ ಬಂದಾಗ ಮಾತ್ರ ನಾವು ಅತೀ ಅನ್ನಿಸುವಷ್ಟು  ಭಾವುಕರಾಗಿ ಬಿಡ್ತೀವಿ..! ಯಾವುದಕ್ಕಾದರೂ ಅಂಟು ಮೆತ್ತಿಕೊಂಡು ಕುಳಿತುಬಿಟ್ರೆ ಅದರಿಂದ ಹೊರಗೆ ಬರೋ ಸಾಹಸವನ್ನೇ ಮಾಡೋದಿಲ್ಲಾ..! ಕಳೆದ ನೆನಪುಗಳನ್ನೆಲ್ಲಾ ಮೆಲುಕು ಹಾಕುತ್ತಾ ಯಾವುದೋ ಒಂದು ಗುಂಗಿನಲ್ಲಿ ಸಾಗೋ ಈ ಮನದಲ್ಲಿ ನಮಗೆ ಒಬ್ಬ ಜೀವಾ, ಒಬ್ಬ ಹಿಮವಂತ, ಒಬ್ಬಳು ಶರ್ಮಿಳಾ ತರಾನೇ ನಾವು ಬದುಕಿಬಿಟ್ರೆ ಎಷ್ಟು ಚೆನ್ನ ಅನ್ನಿಸೋದು ಉಂಟು... ಇವೆಲ್ಲಾ ಕಾದಂಬರಿಯಲ್ಲಿನ ಕೇವಲ ಕಲ್ಪನಾ ಪಾತ್ರಗಳಾದರೂ ಕೂಡ ಅದೇಕೋ ನಮಗೆ ಹಾಗೇನೆ ಇದ್ದು ಬಿಡೋಣ ಅನ್ನಿಸುತ್ತೆ.., ಅವುಗಳ ಹೊರತಾಗಿ ಬೇರೇನೂ ಈ ಮನಸ್ಸಿಗೆ ಇಷ್ಟವಾಗೋದಿಲ್ಲಾ..! ಆ ಮಟ್ಟಿಗಿನ ಹುಚ್ಚು ಭಾವುಕರು ನಾವು..:)


ನೆನಪಿನ ಪುಟಗಳನ್ನ ತಿರುವಿ ಹಾಕ್ತಾ ಇದ್ರೆ ನಮ್ಮ ಅರಿವಿಗೆ ಬರದೇನೇ ಸಾವಿರ ಪ್ರಶ್ನೆಗಳು ಎಲ್ಲಿಂದಲೂ ಬಂದು ಮನದಲ್ಲಿ ಮನೆಮಾಡುತ್ತವೆ..!
ಕಾರಣವಿಲ್ಲದೆ ಹತ್ತಿರ ಬಂದೋರೋ ಕಾರಣ ಹೇಳದೆ ದೂರವಾಗ್ತಾರೆ... ಇನ್ನು ಕೆಲವರು ಕಾರಣ ಇಟ್ಟುಕೊಂಡೇ ಬಂದ್ರು ಆ ಕಾರಣ ತಿಳಿಸದೆ ಹೊರಟಿ ನಿಲ್ತಾರೆ..! ಕಾಲ ಸರಿಯುತ್ತಾ ಹೋದಂತೆ ಕೇವಲ ನೆನಪುಗಳಾಗಿ ಮನದ ಯಾವುದಾದರೊಂದು ಮೂಲೆಯಲ್ಲಿ ಸುಮ್ಮನೆ ಅಡಗಿ ಕುಳಿತು ಕೊನೆಗೆ ನೆನೆಪಿನ ಪುಟ ಸೇರಿ ಬಿಡ್ತಾರೆ..! ಹೀಗೆ ನಮ್ಮ ಬಾಳಿನಲ್ಲಿ ಎಷ್ಟೋ ಸಂಬಂಧಗಳು ಜೊತೆಯಾಗುತ್ತೆ.., ಎಷ್ಟೋ ಕಳಚಿ ಹೋಗುತ್ತೆ... ಆದರೆ ಹೋಗುವಾಗ ನೆನಪುಗಳಾ ಋಣನಾ ಮಾತ್ರ ನಮ್ಮ ಹೆಗಲ ಮೇಲೆ ಹೊರಸಿ ಹೋಗುತ್ತೆ..!


ಸವಿ ನೆನಪುಗಳು ಬೇಕು ಸವಿಯಲೀ ಬದುಕು... ನಿಜ... ಬದುಕೆಂದರೆ ಅದು ಒಂದು ನೆನಪಿನ ಸಾಗರ... ಸಾಲು ಸಾಲು ನೆನಪುಗಳು ಎದೆಯಾಳದಲ್ಲಿ ಅವಿತು ಕುಳಿತಿರುತ್ತವೆ... ಯಾವುದೋ ಒಂದು ಸಮಯದಲ್ಲಿ ಫಕ್ಕನೆ ಎದ್ದು ಬಂದು ಮನಸ್ಸಿಗೆ ಸಂತೋಷವನ್ನು ನೀಡಿದರೆ ಮರುಕ್ಷಣದಲ್ಲೇ ಅದರ ಹಿಂದೆ ನೋವನ್ನು ನೀಡಿ ಕಣ್ಣಂಚಿನ ಕಣ್ಣೀರ ಹನಿಯಾ ಜೊತೆ ಅವು ಕಣ್ಮರೆಯಾಗುತ್ತವೆ..! ಈ ನೆನಪುಗಳೆ ಹಾಗೆ ತುಂಬಾ ನಿಗೂಢ..!! ನಮ್ಮ ನೆನಪಿನ ನೋವುಗಳು ನಾವೇ ಪ್ರೀತಿಸುವ ಮಳೆಯಲ್ಲಿ ಬರುವ ಕಣ್ಣೀರಿನಂತೆ.. ಆ ಕಣ್ಣೀರು ನಮಗೆ ಬಿಟ್ಟರೆ ಇನ್ಯಾರಿಗೂ ತಿಳಿಯೋದೆ ಇಲ್ಲಾ..!

ಬಾಳಿನ ಏರುದಾರಿಯಲ್ಲಿ ಸಾಗುತ್ತಿರುವ ನಮಗೆ ಮುಂದೊಂದು ದಿನ ಹಿಂತಿರುಗಿ ನಮ್ಮ ನೆನಪಿನ ಪುಟಗಳನ್ನು ನೋಡಿದಾಗ ಇದೇ ನೆನಪಿನ ನೋವುಗಳು ತುಟಿ ಅಂಚಿನಲ್ಲೊಂದು ಸಣ್ಣ ಮುಗುಳ್ನಗೆಯನ್ನು ಮೂಡಿಸಬಹುದು.., ಆದರೆ ಅನುಭವಿಸಿದ ನೋವಿಗೆ ತೆತ್ತ ಕಂದಾಯಕ್ಕೆ ಲೆಕ್ಕ ಬರೆದುಕೊಡುವವರುಂಟೆ..?
ಅದೆನೆಲ್ಲಾ ಇದ್ದರೂ ಕೂಡ ಬದುಕಿನ ಕೊನೆ ಹಂತದವರೆಗೂ ನೆನಪಿಗೆ ನೆನಪು ಮಾತ್ರ ಸೇರ್ಪಡೆಯಾಗುತ್ತಲೇ ಇರುತ್ತೆ..! ಒಂದು ಕಾಡೋಕೆ... ಇಲ್ಲಾ ಕಾಡಿಸೋಕೆ...!!

ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ.., ಜೊತೆಗೆ ಸಿಗೋ ಒಂದಷ್ಟು ಕಹಿ ನೆನಪುಗಳಿಂದ ಕಣ್ಣಂಚಲ್ಲಿ ತುಂಬಿಕೊಂಡ ನೀರಿನ ಜೊತೆ ಸಾಗಿದೆ ಈ ಜೀವನಾ..!!