Monday, 19 September 2011

ಆತ್ಮೀಯ ಸ್ನೇಹಕ್ಕೊಂದು ಪ್ರೀತಿಯ Salam...

ಈ ಸ್ನೇಹ ಅನ್ನೋದು ಅನೀರಿಕ್ಷಿತವಾಗಿ ಹುಟ್ಟಿ ಬೆಳೆಯುತ್ತೆ... But ಹಾಗೆ ಹುಟ್ಟಿದ ಸ್ನೇಹ ಪರಸ್ಪರ ಮನಸ್ಸಿನ ಭಾವನೆಗಳನ್ನ ಅರ್ಥ ಮಾಡಿಕೊಳ್ತಾ.., ನೋವನ್ನ, ದುಃಖವನ್ನು ಹಂಚಿಕೊಳ್ತಾ ಬೆಳೆದು ಕೆಲವೊಂದು ಸಲ ಅದೆಷ್ಟೋ ಜನ್ಮದ ಸಂಬಂಧದ ಹಾಗೆ ಅನ್ನಿಸಿ ಬಿಡ್ತದೆ ಅಲ್ವಾ... ನಾವು ತಂದೆ, ತಾಯಿ And ಬಂಧುಗಳು ಇಲ್ಲದೆ ಇರೋ ಅದೆಷ್ಟೋ ಜನ ಅನಾಥರನ್ನ ಪ್ರತಿನಿತ್ಯ ನೋಡಿರುತ್ತೀವಿ But Friend ಇಲ್ಲದೆ ಇರೋವಂತ ವ್ಯಕ್ತಿಯನ್ನು ಯಾರನ್ನನಾದರೂ ನೋಡಿರಲಿಕ್ಕೆ ಸಾಧ್ಯಾನಾ.. ಖಂಡಿತಾ ಹುಡುಕಿದರೂ ಕೂಡ ಯಾರು ಸಿಗಲ್ಲ..! ತಂದೆ, ತಾಯಿ ಮಮತೆಯಿಂದ ವಂಚಿತರಾಗಬಹುದು, ಬಯಸಿದ ಪೀತಿಯಿಂದಲೂ ವಂಚಿತರಾಗಬಹುದು ಆದ್ರೆ ಸ್ನೇಹದಿಂದ ಯಾರೂ ವಂಚಿತರಾಗೋಕೆ ಸಾಧ್ಯವಿಲ್ಲ.. ಅದೇ ಸ್ನೇಹಕ್ಕಿರೂ ಮಹತ್ವ..!
ಎಲ್ಲಾ ಸಂಬಂಧಗಳೂ ಕೂಡ ಪ್ರತಿಯಾಗಿ ನಮ್ಮಿಂದ ಏನನ್ನಾದರೂ Expect ಮಾಡ್ತವೆ... ಆದ್ರೆ ಇಲ್ಲಿ ಸ್ನೇಹ ಮಾತ್ರ ತುಂಬಾ ವಿಶಿಷ್ಟವಾಗಿ ನಿಲ್ಲುತ್ತೆ..! For Example ತಾಯಿಯೊಡನೆ ಇರಬೇಕಾದ "ಸಹನೆ", ತಂದೆಯೊಡನೆ ಇರಬೇಕಾದ "ಭಯ", ಹಿರಿಯರಿಗೆ ಕೊಡಬೇಕಾದ "ಗೌರವ" ಯಾವುದರ ಅವಶ್ಯಕತೆನೂ ಸ್ನೇಹಕ್ಕೆ ಬೇಕಾಗಿಲ್ಲ... ಸ್ನೇಹಕ್ಕೆ ಬೇಕಾದ್ದು ಕೇವಲ ರಹಸ್ಯಗಳಿಲ್ಲದ ಮುಕ್ತ ಶುದ್ಧ ಮನಸ್ಸು ಜೊತೆಗೆ ಬೊಗಸೆ ಪ್ರೀತಿ ಅಷ್ಟೆ..!!





Basically ಸ್ನೇಹ ಹುಟ್ಟೋದು "ಅವಶ್ಯಕತೆಗೆ"... ಅಂದರೆ ತಂದೆ, ತಾಯಿ And Family ಜೊತೆ ಎಷ್ಟೇ Close ಆಗಿದ್ದರೂ ಕೂಡ.., ಕೆಲವೊಂದು ವಿಷಯಗಳನ್ನ, ಮನಸ್ಸಿನ ಭಾವನೆಗಳನ್ನ ಅವರ ಜೊತೆ Share ಮಾಡಿಕೊಳ್ಳೋಕೆ ಆಗಲ್ಲಾ ಅಂತಾ ಸಂದರ್ಭದಲ್ಲಿ ಒಂದು ಮನಸ್ಸು ತಾನೇ ತಾನಾಗಿ ತನ್ನನ್ನ ಅರ್ಥ ಮಾಡಿಕೊಳ್ಳೋ ಇನ್ನೊಂದು ಮನಸ್ಸನ್ನ Expect ಮಾಡೋದು ಸಹಜನೇ ಅಲ್ವಾ... ಹಾಗೆ ಸ್ನೇಹದಲ್ಲಿ ವಯಸ್ಸಿನ ಭೇದ-ಭಾವವಾಗಲಿ ಅಥವಾ ಗಂಡು-ಹೆಣ್ಣು ಅನ್ನೋ ಭೇದ-ಭಾವವಾಗಲಿ ಇರೋದಿಲ್ಲ... ಅದು ಬಯಸೋದು ಕೇವಲ ತನ್ನನ್ನ ಅರ್ಥ ಮಾಡಿಕೊಳ್ಳೋ ಇನ್ನೊಂದು ಮನಸ್ಸನ ಅಷ್ಟೆ..!!


Collegeನಾ First Day ಎಲ್ಲಾ ಹೊಸತು.., ನಮಗೆ ಅಲ್ಲಿ ಯಾರ ಪರಿಚಯನೂ ಇಲ್ಲಾ.., ಮನಸ್ಸಿನಲ್ಲಿ ಒಂದು ಸಣ್ಣ ಅಳುಕು ಇಟ್ಟಿಕೊಂಡೇ ಹೋಗಿರುತ್ತೀವಿ... ಅದೇ ಭಯದಲ್ಲೆ Class Roomಗೆ ಹೋಗಿ ಕೂತ್ಕೊಂಡಾಗ ಅಲ್ಲೇ ಪಕ್ಕದಲ್ಲಿ ಕೂತಿರೋರು ನಮ್ಮನ್ನ ನೋಡಿ ಒಂದು ಸಣ್ಣ Smile ಮಾಡ್ತಾರೆ... ಕೇವಲ ಆ ಒಂದು ನಗು ಸಾಕಾಗಿ ಹೋಗುತ್ತೆ ಸ್ನೇಹಕ್ಕೆ... ಮೊದಲೆ ಭಯ ಆವರಿಸಿರೋ ಮನಸ್ಸಿಗೆ ಆ ಸಣ್ಣ ನಗು "ನಾನಿದ್ದೀನಿ Every Thing Will Be All Right" ಅನ್ನೋ ಒಂದು ಸಂದೇಶನಾ ಕೊಟ್ಟಿರುತ್ತೆ..!! ಅಲ್ಲಿಂದ ಶುರುವಾಗೋ ಅವರ ಗೆಳೆತನ ದಿನಗಳು ಉರುಳಿದ ಹಾಗೆ ಜೀವಕ್ಕೆ ಜೀವ ಕೊಡೋ Friends ಆಗಿ ಹೋಗ್ತಾರೆ..!! ಇಂಥ ಸ್ನೇಹಕ್ಕೆ ಒಂದು ನಮನ ಸಲ್ಲಿಸಲೇಬೇಕಲ್ವ...




ಸ್ನೇಹದ ಇನ್ನು ಒಂದು ಅತಿ ವಿಶಿಷ್ಠವಾದ ಗುಣ ಅಂದ್ರೆ ಇದಕ್ಕೆ ಯಾವುದೇ ವಯಸ್ಸಿನ ಅಂತರ ಬೇಕಾಗಿಲ್ಲ.. ಇದಕ್ಕೊಂದು Best Example ಅಂದ್ರೆ ಒಬ್ಬ ಹುಡುಗ ದಿನ Walkingಗೆ ಅಂತಾ Parkಗೆ ಹೋಗುತ್ತಿದ್ದಾಗ ಆಕಸ್ಮಾತಾಗಿ ಯಾರೋ ಒಬ್ಬ ಇಳಿ ವಯಸ್ಸಿನ ಮುದುಕನ ಪರಿಚಯ ಆಗುತ್ತೆ... ಹಾಗೆ ಆಕಸ್ಮಿಕವಾಗಿ ಆದ ಅವರ ಪರಿಚಯ ಅವರಿಬ್ಬರ ನಡುವಿನ ವಯಸ್ಸಿನ ಅಂತರವನ್ನು ತೊಡೆದು ಹಾಕಿ ಬೃಹತ್ ಸ್ನೇಹದ ಸೇತುವೆಯನ್ನೇ ನಿರ್ಮಿಸಿ ಬಿಡುತ್ತೆ... ಕೇವಲ 18 ವರ್ಷದ ಹುಡುಗನಿಗೆ 70'ತರಾ ಆ ಮುದುಕ ತುಂಬಾ ಹತ್ತಿರದ Friend ಆಗಿ ಹೋಗ್ತಾನೆ...  ಅವರ ಕಷ್ಟ, ಸುಖ, ಮನಸ್ಸಿನ ಒಂಟಿತನದ ನೋವನ್ನ ಹಂಚಿಕೊಳ್ಳೋದರ ಜೊತೆಗೆ ಇವನ ತಿಳುವಳಿಕೆ ಇಲ್ಲದ ಮನಸ್ಸಿಗೆ ಆ ಹಿರಿ ಜೀವ ತನ್ನ Experience` ಮೂಲಕ ಅವನನ್ನ ಉತ್ತಮ ವ್ಯಕ್ತಿಯನ್ನಾಗಿ ಮಾಡೋಕೆ ಪ್ರಯತ್ನ ಮಾಡುತ್ತೆ.., ನಿಜಕ್ಕೂ ಇದು Great ಅನ್ಸಲ್ವಾ..? ಹಾಗೆ ಹುಡುಗನಿಗೇನೋ ಕೆಲಸ ಬಂದು 1 ದಿನ Walkಗೆ ಹೋಗಿಲ್ಲಾ ಅಂದ್ರೆ.., ತಕ್ಷಣವೇ ಆ ಹಿರಿ ಜೀವ ಒಂದು Call ಮಾಡಿ "ನಿನ್ನನ್ನು ಇವತ್ತು ನೋಡದೆ ಯಾಕೋ ಮನಸ್ಸು ತುಂಬಾ ಚಡಪಡಿಸಿ ಬಿಡ್ತು ಮಗು" ಅಂದಾಗ ಆ ಹುಡುಗನ ಕಣ್ಣಲ್ಲಿ ನೀರೇ ಬಂದು ಬಿಡುತ್ತೆ..!! ಇದಲ್ವಾ Friendship ಅಂದ್ರೆ...


ಏನ್ ಹೇಳ್ತಿರಾ ಇಂಥಾ ಸಂಬಂಧಕ್ಕೆ..??




ಇನ್ನು ಈ Friendship ನಲ್ಲಿ ಅತಿ ವಿಶೇಷವಾಗಿ ಕಾಣೋದು ಹುಡುಗ-ಹುಡುಗಿಯ ನಡುವಿನ ಸ್ನೇಹ..! ಮೊದಲೆ ಹೇಳಿದ ಹಾಗೆ ಸ್ನೇಹಕ್ಕೆ ಲಿಂಗ ಭೇದ ಇಲ್ಲಾ... ಯಾರೋ, ಎಲ್ಲೋ ಪರಸ್ಪರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುತ್ತಾ ತುಂಬಾ ಹತ್ತಿರವಾಗಿ ಹೋಗ್ತಾರೆ... ತನ್ನೊಡಲ ನೋವನ್ನೆಲ್ಲಾ ಅವನ ಜೊತೆ ಹೇಳಿಕೊಂಡು ಮನಸಾರೆ ಅತ್ತು ಬಿಡೋ ಹುಡುಗಿ.., ನೊಂದಿರೋ ಆ ಮನಸ್ಸನ್ನ ಸಂತೈಸಿ, ಸಾಂತ್ವನ ಹೇಳೋ ಹುಡುಗ.., ತುಂಬಾ ವಿಶಿಷ್ಠವಾಗಿ ಕಾಣ್ತಾರೆ... ತನ್ನ ಸುತ್ತಾ ಸಾಕಷ್ಟು ಗೆಳೆಯರ ಗುಂಪೇ ಇದ್ದರೂ ಕೂಡ ಅವಳೊಬ್ಬಳೂ "ಗೆಳತಿ" ಅವನಿಗೆ ವಿಶೇಷವಾಗಿ ಕಾಣಿಸೋಕೆ ಶುರುವಾಗ್ತಾಳೆ... ಮನೆಗೆ ಹೊರಡುವಾಗ ಅವಳಿಗೊಂದು Message ಮಾಡ್ತಾನೆ.., ತಕ್ಷಣ ಆ ಕಡೆಯಿಂದ ಒಂದು ಉತ್ತರ "Ride Bike Safely... Take Care"... ಇವನು ಇನ್ನು ಮನೆ ತಲುಪಿ Mobile ನೋಡುವಷ್ಟರಲ್ಲಿ ಇನ್ನೊಂದು Message ಬಂದಿರುತ್ತೆ "Have U Reached Home Safely"... ಅದನ್ನ ನೋಡಿದ ಆ ಹುಡುಗನ ಮುಖದಲ್ಲಿ ಒಂದು ರೀತಿಯ ಮಂದಹಾಸ..!! ಹೀಗೆ ಆರಂಭವಾದ ಸ್ನೇಹ ಪ್ರೀತಿಯಾಗಿ ಬದಲಾದರೂ ಆಶ್ಚರ್ಯ ಪಡಬೇಕಾಗಿಲ್ಲ... Also ಪರಸ್ಪರ ತಿಳಿದುಕೊಂಡಿರೋರು ಬಾಳಸಂಗಾತಿಗಳಾಗೋದರಲ್ಲಿ ತಪ್ಪೇನಿಲ್ಲಾ ಅಲ್ವಾ..? Even ಸ್ನೇಹ ಅನ್ನೋದು ಪ್ರೀತಿಯ ಇನ್ನೊಂದು ಮುಖ ಅಂತಾ ಬೇಕಾದ್ರು ಹೇಳಬಹುದು..!!




ಹಾಗೆ ಕಾಣದೆ ಇದ್ದರೂ ಕೂಡ ಮನಸ್ಸಿಗೆ ಹತ್ತಿರವಾಗೋ Internet ಸ್ನೇಹ  ತುಂಬಾ ವಿಶೇಷವಾದದ್ದು..!! ಇತ್ತೀಚಿನ ದಿನಗಳಲ್ಲಿ ಈ Social Networks ಪ್ರಭಾವದಿಂದ Friends Circle ತುಂಬಾ ದೊಡ್ಡಾದಾಗ್ತಾ ಇದೆ... ಪರಸ್ಪರ ನೋಡದೆ ಇದ್ದರೂ ಕೂಡ ಯಾವುದೋ ಒಂದು ಮೂಲೆಯಲ್ಲಿ ಇರೋ ವ್ಯಕ್ತಿಯಾ ಕಷ್ಟವನ್ನ, ಮನಸ್ಸಿನ ನೋವನ್ನ ಅರ್ಥ ಮಾಡ್ಕೊಂಡು ಅವರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸೋ ಮೂಲಕ ನೊಂದಿರೋ ಆ ಮನಸ್ಸಿಗೆ ಸಾಂತ್ವನ ಹೇಳಿ.., ಸಂತೈಸೋಕೇ ಪ್ರಯತ್ನ ಮಾಡ್ತಾ ಅದೆಷ್ಟೋ ಮೈಲಿಗಳ ಅಂತರದಲ್ಲಿದ್ದರೂ ಕೂಡ ಮನಸ್ಸಿಗೆ ಹತ್ತಿರವಾಗೋಗಿ ಬಿಡ್ತಾರೆ... ಹೀಗೆ ಇಲ್ಲಿ ಅನಿರೀಕ್ಷಿತವಾಗಿ ಹುಟ್ಟೋ ಸ್ನೇಹ ಅಣ್ಣ-ತಂಗಿ.., ಅಕ್ಕ-ತಮ್ಮ ಹೀಗೆ ಅದೆಷ್ಟೋ ಸಂಬಂಧಗಳನ್ನ ಹುಟ್ಟಿ ಹಾಕುತ್ತೆ...  ಇಂಥ ಸ್ನೇಹಕ್ಕೊಂದು Hats Off ಹೇಳಲೇಬೇಕಲ್ವಾ..??




ಹೀಗೆ ಸ್ನೇಹ ಅನ್ನೋದು ನಾನಾ ಅರ್ಥದಲ್ಲಿ ಪ್ರತಿನಿತ್ಯ ನಮಗೆ ಕಾಣಸಿಗುತ್ತೆ.., ಆದರೂ ಎಲ್ಲಾ ಅರ್ಥಗಳಿಗೂ ಮೀರಿದ್ದು ಈ ಸ್ನೇಹ ಅಂದ್ರೆ ತಪ್ಪಿಲ್ಲಾ... ಮಾತು ಅರ್ಥವಾಗೋದು ಸಾಮಾನ್ಯರಿಗಾದರೆ.., ನಾವು ಹೇಳದೆ ನಮ್ಮ ಮೌನವನ್ನ ಅರ್ಥ ಮಾಡಿಕೊಳ್ಳೋ ಶಕ್ತಿ ಗೆಳೆತನಕ್ಕೆ ಇರುತ್ತೆ.. ಹಾಗೆ ಎಲ್ಲೋ ಒಂದು ಗಳಿಗೆಯಲ್ಲಿ ಅವರ ಮಡಿಲಲ್ಲೋ, ಭುಜದ ಮೇಲೋ ತಲೆಯಿಟ್ಟು ಮಲಗಿದಾಗ "ಅಮ್ಮನ" ತರ ಅನ್ನಿಸಿದರೂ ಅದರಲ್ಲಿ ಏನೂ ಆಶ್ಚರ್ಯವಿಲ್ಲಾ... ಇಂತಹ ಆತ್ಮೀಯ ಗೆಳೆತನಕ್ಕೊಂದು ಪ್ರೀತಿಯ ನಮನ ಸಲ್ಲಿಸಲೇಬೇಕಲ್ವಾ..??



"ಕೊಡುವುದು ಬೇಡ ಜೀವಕ್ಕೆ ಜೀವ..
ಹಂಚಿಕೊಂಡರೆ ಸಾಕು ನನ್ನೊಡಲ ನೋವ"

9 comments:

  1. yeshtondhu utsaaha vidhe ninnalli....heege bareethiru...chennaagi bareetheeya

    ReplyDelete
  2. ಏನು ಪ್ರತಿಕ್ರಿಯಿಸಲಿ ಗೆಳತಿ ನಿನ್ನ ಈ ಲೇಖನಕ್ಕೆ, ಮೂಖ ನಾನು..:)) ಲೇಖನವು ತುಂಬಾ ನವಿರಾದ ಭಾವನೆಗಳಿಂದ ಕೂಡಿದೆ..:)) ನಿನ್ನ ನೂರೆಂಟೂ ಕನಸ್ಸುಗಳೂ ನನಸಾಗಲೇಂದು ಹಾರೈಸುತ್ತೇನೆ..:)) ನಿನ್ನ ಈ ಬರಹ ಓದುತ್ತಿದ್ದಂತೆ ನನ್ನ ಕಣ್ಣುಗಳು ಒದ್ದೆಯಾದವು ಇದಕ್ಕಿಂತಲೂ ಹೆಚ್ಚಿಗೆ ಹೇಗೆ ಅಭಿನಂದಿಸಲಿ..:)) ಭಾಷೆ ಅದ್ಭುತವಾಗಿದೆ ಇನ್ನಷ್ಟು ಬರೀತಿರು..:))

    ReplyDelete
  3. ಸಿಂಧುಚಂದ್ರ... ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು..:)

    ReplyDelete
    Replies
    1. I like ur sweet memory.. continue ur attitude its best suggestion for feeling hearts

      Delete
  4. DEW DROP(ಮಂಜಿನ ಹನಿ)... ಖಂಡಿತವಾಗ್ಲು ಬರಿಯೋಕೆ ಪ್ರಯತ್ನ ಮಾಡ್ತೀನಿ...:) ನಿಮ್ಮ ಅಭಿಪ್ರಾಯಕ್ಕೆ ತುಂಬು ಹೃದಯದ ಧನ್ಯವಾದ..:)

    ReplyDelete
  5. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಹಾಗೆ ನಿಮ್ಮ ಪರಿಷಯವೂ ತುಂಬಾ ಸಿಂಪಲ್ ಆಗಿ ಹೇಳಿರೋ ಶೈಲಿ ನಿಮ್ಮ ಮುಗ್ಧ ಸ್ವಭಾವವನ್ನು ತೋರಿಸುತ್ತದೆ. ನಿಮ್ಮ ಮುದ್ದು ಮನಸ್ಸಿನ ಎಲ್ಲಾ ಆಸೆಗಳು ನೆರವೇರಲೆಂದು ಹಾರೈಸುತ್ತೇನೆ. ವಂದನೆಗಳೊಂದಿಗೆ ಇತಿ ನಿಮ್ಮ ಸ್ನೇಹಿತ.... :)

    ReplyDelete
  6. ದೀಪು ಸೂಪರ್ ಆಗಿದೆ ನಿನ್ನ ಬ್ಲಾಗ್ ತುಂಬಾ ಇಷ್ಟ ಆಯಿತು :)
    ನಿನ್ನ ಹಾಗೆ ಮುದ್ದಾಗಿದೆ ತಂಗಿ ನಿನ್ನ ಬ್ಲಾಗ್ ಗೂ ಸಹ :)
    ನಿನ್ನ ಬರವಣಿಗೆ ತುಂಬಾ ಸರಳವಾಗಿದೆ ಮನಸ್ಸಿಗೆ ಮುದ ನೀಡುತ್ತೆ :)
    ನಿನಗೆ ಶುಭವಾಗಲಿ :)
    ಇನ್ನೂ ಬರೆಯುತ್ತಾ ಇರು :)

    ReplyDelete
  7. ವಸಂತ್ ಅವರೆ ತುಂಬಾ ಧನ್ಯವಾದ ನಿಮ್ಮ ಹಾರೈಕೆಗೆ..:):)

    ReplyDelete
  8. ಪ್ರಕಾಶ್ ಅಣ್ಣಾ ಬರೆಯಲು ಸ್ಪೂರ್ತಿ ನೀವೆ...:)
    ನಿಮ್ಮ ಹಾರೈಕೆ, ಆಶೀರ್ವಾದ ಇದ್ದಲ್ಲಿ ಖಂಡಿತ ಬರಿತೀನಿ..:):)

    ReplyDelete