Monday, 14 November 2011

ಅಮ್ಮಾ ನಿನಗಾಗಿ...

ಅಮ್ಮಾ... ನಿನ್ನ ನೆನಪುಗಳಿಗೀಗಾ ಪೂರ್ತಿ ವರ್ಷ.., ಹಾಗೆ ಈ ಜೀವದ ಆಸೆ, ಕನಸುಗಳೆಲ್ಲಾ ಬತ್ತಿ ಹೋಗಿ ಕೂಡ ವರ್ಷವೇ ಕಳೆದಿದೆ... ಆದರೆ ಇಂದೇಕೋ ನೀ ನನ್ನನ್ನು ಬಿಟ್ಟು ಹೋಗಿದ್ಯಾಕೆ ಅನ್ನೋ ಪ್ರಶ್ನೆ ನನ್ನಾ ತುಂಬಾ ಕಾಡ್ತಾ ಇದೆ.., ಅದಕ್ಕೆ ಕಾರಣ ತಿಳಿಸಲು ನೀನೆ ಇಲ್ಲಾ ಅನ್ನೋ ನಂಬಲಾರದ ಕಹಿ ಸತ್ಯ ಕೂಡ ನನ್ನೊಟ್ಟಿಗಿದೆ..!:(


ಬೆಟ್ಟದಷ್ಟು ಪ್ರೀತಿಯ ಧಾರೆ ಎರೆದು., ಬದುಕಿನಲ್ಲಿ ಬರುವ ಸವಾಲುಗಳನೆಲ್ಲಾ ಹೆದರಿಸಲು ಧೈರ್ಯವಾ ತುಂಬಿ., ಬಾಳಿನ ಅರ್ಥವನ್ನ ತಿಳಿಸಿ., ನಗುತ್ತಾ ನನ್ನ ಬೆಳೆಸಿ... ಕಾಣದೆ ಕಣ್ಮರೆಯಾಗಿ ಹೋದೆಯಲ್ಲಾ ಯಾಕೆ..?
ಬೆಳೆದ ಬಳ್ಳಿಗೆ ಮರದ ಆಸರೆ ಇನ್ನೇತಕೆ ಎಂದು ತಪ್ಪು ತಿಳಿದುಬಿಟ್ಟೆಯಾ ಅಮ್ಮಾ.. ಮರದ ಆಸರೆ ಇಲ್ಲದೆ ಬಳ್ಳಿಯಾದರೂ ಹೇಗೆ ತಾನೇ ಬದುಕೀತು ಅನ್ನೋದು ತಿಳಿಯದೇ ಹೋಯಿತಾ ನಿನಗೆ..?:(


ನನಗಿನ್ನೂ ಚೆನ್ನಾಗಿ ನೆನಪಿದೆ ಅಮ್ಮಾ.., ನಿನ್ನ ಜೊತೆ ಹೋಗುವಾಗ ದಾರಿಯಲ್ಲಿ ಯಾರಾದರೂ ಅನಾಥ ಮಕ್ಕಳನ್ನ ನೋಡಿದರೆ ನೋವು ಪಡುತ್ತಿದ್ದ ನಿನಗೆ.., ನನ್ನನ್ನೆ ಅನಾಥೆಯಾಗಿ ಮಾಡಿ ಹೋಗವ ಮನಸ್ಸಾದರೂ ಹೇಗೆ ಬಂತು..?
ಯಾರ ಪ್ರೀತಿಯಿಂದ ವಂಚಿತರಾದ್ರೂ ಅಮ್ಮನಾ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದವರು ತುಂಬಾ ನತದೃಷ್ಠರು ಅಂತೇಳುತ್ತಿದ್ದೆ ನೀನು.., ಆದರೀಗ ನಿನ್ನ ಮಮತೆ, ಪ್ರೀತಿ, ವಾತ್ಸಲ್ಯಗಳಿಂದ ವಂಚಿತಳಾಗಿರುವ ನಾನೂ ಕೂಡ ನತದೃಷ್ಠಳೇ ಅಲ್ಲವಮ್ಮಾ..!


ನೀನಿಲ್ಲದೆ ಕ್ಷಣ ಕಾಲ ಕೂಡ ರೆಪ್ಪೆ ಮುಚ್ಚಲು ಹೆದರುತ್ತಿದ್ದ ಕಣ್ಣುಗಳೀಗಾ ನಿನ್ನಾ ಕಾಣದೆ ಕಂಗಾಲಾಗಿ ಕತ್ತಲೆಯಲ್ಲಿ ನಿನ್ನನ್ನು ಹುಡುಕುತ್ತಾ ಸುರಿಸುತ್ತಿರುವ ಕಣ್ಣೀರು ಕಾಣಿಸುತ್ತಿಲ್ಲವಾ ನಿನಗೆ..?
ನಾ ಹುಟ್ಟಿದಾಗ ನೀನು ಪಟ್ಟಿದ್ದ ಸಂತಸ ಅದೆಷ್ಟೋ ಆದರಿಂದು ನಿನ್ನನ್ನು ಕಳೆದುಕೊಂಡು ಈ ಜೀವ ಅನುಭವಿಸುತ್ತಿರುವ ನೋವು ಎಷ್ಟೆಂದು ನಿನಗೆ ತಿಳಿಯುತ್ತಿಲ್ಲವಾ ಅಮ್ಮಾ..?ದಿನಕ್ಕೆ ಸಾವಿರ ಸಾವಿರ ಸಾರಿ ಕರೆಯುತ್ತಿದ್ದೇನಲ್ಲಾ ಪ್ರತಿ ವಿಷಯಕ್ಕೂ ನಿನ್ನಾ ಅಮ್ಮಾ.. ಅಮ್ಮಾ.. ಎಂದು... ಕಿಂಚಿತ್ತು ಬೇಸರಿಸದೆ ನನ್ನೆಲ್ಲಾ ಕರೆಗೂ ಸ್ಪಂದಿಸುತ್ತಿದ್ದ ನಿನಗೆ.., ನಾನು ಹೊರಟು ಹೋದರೆ ನನ್ನಾ ಮಗಳಿಗೆ ಆಸರೆಯಾಗುವವರು ಯಾರು., ನಾನಿರದೆ ಆ ನನ್ನ ಜೀವವಾವದರೂ ಹೇಗೇ ತಾನೇ ಬದುಕಲು ಸಾಧ್ಯ ಅನ್ನೋ ಕನಿಕರವೂ ನನ್ನ ಮೇಲಿರದೆ ಬಿಟ್ಟು ಹೋದೆಯಾ ನನ್ನಾ..?

ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳನ್ನು ಮನದಲ್ಲಿ ತುಂಬಿಕೊಂಡು.., ಸರಿ-ತಪ್ಪುಗಳ ಅರಿವಿಲ್ಲದೆ ಪರಿತಪಿಸುತ್ತಿರುವ ಈ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ನೀನಿರಬೇಕಿತ್ತು...

ಈ ಜನ್ಮದಲ್ಲಿ ನೀ ಕೊಟ್ಟಾ ಪ್ರೀತಿಯಾ ಋಣ ತೀರಿಸಲು ಇನ್ನೆಷ್ಟೂ ಜನ್ನವೆತ್ತಿದರೂ ಸಾಲದು... ಈ ಬದುಕಿನಲ್ಲಿ ನೀ ಬಿಟ್ಟು ಹೋಗಿ ಬರಿದಾಗಿರುವ ಸ್ಥಾನವನ್ನಾ ತುಂಬಲು ಯಾರಿಂದಲೂ ಸಾಧ್ಯವಿಲ್ಲಾ..:(

ಮರುಜನ್ಮವೊಂದಿದ್ದರೆ ನಿನ್ನಾ ಮಗಳಾಗಿ ಹುಟ್ಟಿ.., ನಿನ್ನಾ ಋಣವನ್ನು ಕಿಂಚಿತ್ತಾದರೂ ತೀರಿಸುವ ಅವಕಾಶ ನನಗೆ ಕೊಡು...
ಖಂಡಿತಾ ಕೊಡುತ್ತಿಯಲ್ಲಾವಾ ಅಮ್ಮಾ..:(:(
8 comments:

  1. ಪ್ರೀತಿಯನ್ನು ಕಲಿಸುವವಳೇ ತಾಯಿ ಅವಳೊಬ್ಬಳೆ ಸತ್ಯ..:))) ಹಿರಿಯರ ಉಕ್ತಿಯಂತೆ "ಅಮ್ಮ ಸತ್ಯ, ಅಪ್ಪ ನಂಬಿಕೆ"..:))) ಆಕೆಯದು ಒಂದು ಸಣ್ಣ ಪ್ರಪಂಚ ತನ್ನ ಮನೆ, ಮಕ್ಕಳು, ನೆರೆಹೊರೆ.. ಎಲ್ಲರನ್ನೂ ಪ್ರೀತಿಸುವ ಪ್ರೇಮಮಯಿ ಆಕೆ..:))) ಅವಳ ಸ್ಥಾನವನ್ನು ಯಾರೂ ತುಂಬಿಕೊಡೋದಕ್ಕೆ ಆಗೋಲ್ಲ, ಅವಳು ಕೊಡುವ ಪ್ರೀತಿಗೆ ಯಾವುದು ಸಾಟಿಯಲ್ಲ..:))) ಆದರೆ ನಿನ್ನ ಈ ಲೇಖನ ನೋಡಿ ಮನಸ್ಸು ತೇವವಾಯ್ತು..:(( ತುಂಬಾ ಚೆನ್ನಾಗಿ ನಿನ್ನ ಮನಸ್ಸಿನ ಭಾವನೆಗಳಿಗೆ ಬಣ್ಣ ನೀಡಿ ಲೇಖನದಲ್ಲಿ ಮೂಡಿಸಿರುವೆ..:))) ಅಮ್ಮ ಇರುವಷ್ಟು ದಿನಗಳಲ್ಲೇ ಬೆಟ್ಟದಷ್ಟು ಪ್ರೀತಿಯನ್ನೂ, ಬಾಳಿನ ಅರ್ಥವನ್ನೂ ಮತ್ತು ಬದುಕಿನ ಸವಾಲುಗಳನ್ನು ಎದುರಿಸುವ ಧೈರ್ಯವನ್ನೂ ಕಲಿಸಿ ಹೋಗಿದ್ದಾರೆ.. ಅವರ ಉಡುಗೊರೆಗಳವು ಜೀವನ ಪರ್ಯಂತ ಕಾಪಾಡಿಕೊ..:))) ಅಮ್ಮ ನಿನ್ನ ಜೊತೆಗಿದ್ದಷ್ಟೂ ವರ್ಷಗಳೂ ನಿನಗೆ ಪ್ರೀತಿ, ಸ್ನೇಹ, ಮಾನವತೆ, ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಿದ್ದಾರೆ ಅವರ ಜೀವನ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ..:))) ಅಮ್ಮನ ನೆನಪುಗಳು ಹಸಿರಾಗಿ ಉಳಿದು, ಪ್ರತಿಯೊಂದೂ ಬಾಳಿಗೆ ದಾರಿದೀಪವಾಗಲಿ..:))) "ಮನುಷ್ಯ ವಾಸ್ತವದಲ್ಲಿ ಬದುಕಿದ್ರೂ, ಸುಖಿಸುವುದು ಕನಸ್ಸುಗಳಲ್ಲಿ.. ಕನಸ್ಸುಗಳು ಸತ್ತ ದಿನ ಮನುಷ್ಯನ ಸುಖ ಸತ್ತಂತೆಯೇ ಸರಿ.." ಅಮ್ಮ ನಿನಗೆ ಕನಸ್ಸುಗಳನ್ನು ಕಟ್ಟಿಕೊಟ್ಟಿದ್ದಾರೆ, ನಿನ್ನ ಕನಸ್ಸುಗಳಲ್ಲಿ-ನೆನಪುಗಳಲ್ಲಿ ಅಮ್ಮ ಇನ್ನೂ ಜೀವಂತವಾಗಿದ್ದಾರೆ ಚಿಂತೆ ಬೇಡ ಗೆಳತಿ..:))) ಅವರು ಎಲ್ಲಿದ್ದಾರೋ ಅಲ್ಲಿಂದಲೇ ನಿನ್ನನ್ನು ಅರಸುತ್ತಿರ್ತಾರೆ..:))) ನಿನಗೆ ಒಳ್ಳೆಯದಾಗಲಿ..:))

    ReplyDelete
  2. ಪ್ರೀತಿಯನ್ನು ಕಲಿಸುವವಳೇ ತಾಯಿ., ಅವಳೊಬ್ಬಳೆ ಸತ್ಯ ಅನ್ನೋದು ಅಕ್ಷರಸಹ ನಿಜ ಪ್ರಸಾದ್..!
    ನೀನು ಹೇಳಿದಂತೆ ಅವಳು ಕಟ್ಟಿಕೊಟ್ಟು ಹೋಗಿರುವ ಕನಸುಗಳಲ್ಲೆ ನನ್ನ ಬದುಕು ಸಾಗುತ್ತಿದೆ..:)
    ಅವಳ ನೆನಪಿರದ ಕ್ಷಣ ನನ್ನಾ ಕನಸ್ಸಿನಲ್ಲಿಯೂ ಇಲ್ಲಾ..!

    ನಮಗಾಗಿಯೇ ಅವಳ ಇಡೀ ಜೀವನವನ್ನು ತ್ಯಾಗ ಮಾಡಿ ಬದುಕುವ., ಸ್ವಾರ್ಥವಿರದ ಮನಸ್ಸಿನಾ ಕರುಣಾಮಯಿ ತಾಯಿ..:)
    ನಮಗೋಸ್ಕರನೇ ತನ್ನೆಲ್ಲಾ ಪ್ರೀತಿಯಾ ಧಾರೆ ಎರೆದರೂ ನಮ್ಮಿಂದ ಬೊಗಸೆ ಪ್ರೀತಿಯನ್ನಷ್ಠೆ ಪಡೆದು ಧನ್ಯಲಾಗುವ ಅಲ್ಪ ತೃಪ್ತಳು ಅಮ್ಮಾ..!

    ನಿನ್ನಾ ಅಭಿಪ್ರಾಯ.., ಮೆಚ್ಚುಗೆಗೆ ಧನ್ಯವಾದ..:):)

    ReplyDelete
  3. ಹೌದು ಆಕೆ ಬೊಗಸೆ ಪ್ರೀತಿಗಷ್ಟೇ ತೃಪ್ತಿ ಪಡುವ ಅಲ್ಪ ತೃಪ್ತಳು ದೀಪು..! ಅವಳು ಇನ್ನಷ್ಟು ನಿರೀಕ್ಷಿಸಿದ್ದರೆ ನಾವು ಏನು ಕೊಡಲು ಸಮರ್ಥರು, ಅವಳು ನಮಗಾಗಿ ತಾಳಿಕೊಂಡ ನೋವುಗಳಿಗೆ, ನಮ್ಮನ್ನು ಬೆಳೆಸಲು ಪಟ್ಟ ಪರಿಪಾಟಲುಗಳಿಗೆ ಯಾವುದನ್ನು ಸಾಟಿಯಾಗಿ ಕೊಟ್ಟೇವು ನಾವು..! ಆದ್ದರಿಂದಲೇ ಬುದ್ದಿವಂತ ಹಿರಿಯರು ಹೇಳುವುದು "ಅಮ್ಮನ ಋಣ ಎಷ್ಟು ಜನ್ಮ ಎತ್ತಿದರೂ ತೀರಿಸಲು ಸಾಧ್ಯವಿಲ್ಲವೆಂದು"..:) ಇನ್ನಷ್ಟು ಬರಿ..:))) ಭಾವಗಳಿಗೆ ಬಣ್ಣ ನೀಡಿ ಕಾಗದದ ಮೇಲೆ ಚಿತ್ತಾರ ಮೂಡಿಸುವ ಕಲೆ ನಿನಗೆ ಒಲಿದಿದೆ ಗೆಳತಿ.. ನವಿರಾದ ಭಾವಗಳನ್ನು ಮನ ಮುಟ್ಟುವಂತೆ ನಿರೂಪಿಸ್ತೀಯ..:))) ಒಳ್ಳೆಯದಾಗಲಿ..:)))

    ReplyDelete
  4. Deepuravare, nimma modala parichayatmaka lekhana odidaaga, neevu simple hudugi maatra endu tilide. nantara nimma ammana agalike novina lekhana odidate entaha kallu hurudayadavarigu kannu tevagolluttave. nimma ella lekhanagalallu ontitana kaaduttade embude Agide. Adare neevu preeti emba arthakke vishalavaada artavanne tilisiddiri. Hathasharaagabedi, nimma kanasella nanasaaguttave. neevu buddivantariddiri. nimma tayiya agalike novu iddaroo saha avalu edurigilladiddaru, avalu matu, neevu keluttidda parsnege uttarisutidda reeti. avala preeti. A nenapugala belakinalli neevu munnedeyabahudallve. nodukollabedi. A devaru nimage olleyadu maaduttane.

    ReplyDelete
  5. ಧನ್ಯವಾದ ಪ್ರಸಾದ್ ನಿನ್ನ ಪ್ರೋತ್ಸಾಹಕ್ಕೆ..:):)

    ReplyDelete
  6. ನಂಜುಂಡರಾಜು ಅವರೆ ನಿಜ ನಿಮ್ಮ ಮಾತು... ಧನ್ಯವಾದ ನಿಮ್ಮ ಸಲಹೆಗಳಿಗೆ ಹಾಗೂ ಪ್ರೋತ್ಸಾಹಕ್ಕೆ..:):)

    ReplyDelete
  7. Sis wat ever u told is correct.. no one can match moms love..mom is grt...god will bless u :)

    ReplyDelete
  8. cant drop a word..amma na preetiya jagattu ninna spoortiyaagirali, aduve ninna badukina bahu dodda shaktiyaadeetu deepu...    preetiyinda,

    ReplyDelete