ತುಂಬಾ ದಿನದ ನಂತರ Blog Update ಮಾಡೋ ಮನಸಾಗಿ., ಬಿಡುವಿಲ್ಲದ ಈ Lyfಗೆ ಮನಸ್ಸಲ್ಲೇ ಶಪಿಸುತ್ತಾ... ಯಾವ ವಿಷಯದ ಬಗ್ಗೆ ಬರೀಬೇಕು ಅಂತಾ ಯೋಚಿಸ್ತಾ ಇದ್ದಾಗ ಈ ಮನಸ್ಸಿನಲ್ಲಿ ಮೂಡಿದ್ದು "ಪ್ರೀತಿ" ಎಂಬ ಎರಡೇ ಅಕ್ಷರ..!!! ಎಂಥವರನ್ನು ಸಹ ಕ್ಷಣಕಾಲ ಮೂಕವಿಸ್ಮಿತರನ್ನಾಗಿಸಿ ಬಿಡುವ ಶಕ್ತಿ ಕೇವಲ ಪ್ರೀತಿಯೆಂಬ ಈ ಎರಡಕ್ಷರಕ್ಕಿದೆ ಎಂದರೆ ಅಚ್ಚರಿಪಡುವಂತಾದ್ದು ಏನು ಇಲ್ಲಾ.. Bcoz ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಒಂದು ಭಾರಿಯಾದರೂ ಅದು ಅನುಭವಕ್ಕೆ ಬಂದಿರುತ್ತದೆ..!! ಸದ್ಯ ಈ ಮನಸು ಸಹ "ಪ್ರೀತಿಯ" ಗುಂಗಿನಲ್ಲಿ ಇದಿದ್ದರಿಂದಲೋ ಏನೋ ಅದರ ಬಗ್ಗೆ ಬಿಟ್ಟು ಬೇರೆ ಯಾವ ವಿಷಯದ ಬಗ್ಗೆಯೂ ಬರೆಯುವ ಮನಸ್ಸಾಗಲಿಲ್ಲ..!! :-) :-)
ಹೌದು ಈ ಪ್ರೀತಿ ಅಂದರೇನು?? ಅದು ಎಲ್ಲಿ ಹುಟ್ಟುತ್ತೆ?? ಎಲ್ಲಿ ಕೊನೆಯಾಗುತ್ತೆ??
ಪ್ರತಿಯೊಬ್ಬರಿಗೂ ಈ ತರದ ಪ್ರಶ್ನೆಗಳು ತಲೆಯಲ್ಲಿ ಸುಳಿದಾಡಿ ಹೋಗಿರುತ್ತೆ... "ಪ್ರೀತಿ" ಎಂದರೆ ವ್ಯಾಖ್ಯಾನಕ್ಕೆ ನಿಲುಕದ., ತರ್ಕಕ್ಕೆ ಸಿಗದ ಒಂದು ಮಧುರ ಬಾಂಧವ್ಯ..!!! ಅದು ಹೇಗೋ., ಎಲ್ಲೋ ಹುಟ್ಟಿದರೂ ಕೂಡ ಕೊನೆಯಂಬುದು ಮಾತ್ರ ಅದಕ್ಕಿಲ್ಲ..!!
ಪ್ರೀತಿಯೆಂದರೆ ಆಕಾಶದಲ್ಲಿ ಸ್ವಚಂಧವಾಗಿ ಹಾರಾಡೋ ಹಕ್ಕಿಯಾ ತರ.. ಯಾವುದೇ ತರವಾದ ಎಲ್ಲೇ ಆಗಲಿ., ಬಂಧವಾಗಲಿ ಅದಕ್ಕೆ ಇಲ್ಲಾ..!! ಹಾಗೇ ಈ ಪ್ರೀತಿಗೆ ಅತ್ಯವಶ್ಯಕವಾಗಿ ಬೇಕಾದ್ದು ಜೊತೆಗಿದ್ದು ಜೋಪಾನ ಮಾಡೋ ಒಂದು ಹೃದಯಾ., ಜೊತೆಗೊಂದಷ್ಟು ಅಕ್ಕರೆಯ ನುಡಿ., ಸ್ವಲ್ಪ ಕಾಳಜಿ ಹಾಗೂ ಯಾವುದನ್ನಾದರೂ ಸಹನೆಯಿಂದ ಆಲಿಸುವ ಭಾವ..!! ಅಷ್ಟನಲ್ಲದೆ ಬೇರೇನನ್ನು ಬಯಸುವುದಿಲ್ಲ "ಈ ಪ್ರೀತಿ"..!!
"ಪ್ರೀತಿ" ಅನ್ನೋದು ಒಂದು ಸುಂದರ ಬಾಂಧವ್ಯ... ಎರಡು ಹೃದಯಗಳನ್ನು ಒಂದು ಮಾಡೋ ಸುಮಧುರ ಅನುಬಂಧ..!! ಬದುಕಿನ ಪ್ರತಿ ಹಾದಿಯಲ್ಲೂ., ಪ್ರತಿ ಹಂತದಲ್ಲೂ., ಜಗತ್ತಿನಾದ್ಯಂತ ಎಲ್ಲರೂ ಬಯಸುವ ಒಂದು ಮಧುರ ಅನುಭವ ಈ ಪ್ರೀತಿ ಅಂದರೆ ತಪ್ಪಾಗಲ್ಲ... ಹಾಗೆ ಈ ಪ್ರೀತಿ ಒಂದು ಸಲ ಹೃದಯ ಸ್ಪರ್ಶಿಸಿತು ಅಂದರೆ ಅದರ ಅನುಭವ., ಅನುಭವಿಸಿದವರಿಗಷ್ಟೇ ಗೊತ್ತು..!! ಎಂಥಾ ಕಲ್ಲು ಮನಸ್ಸಾನಾದರೂ ಕರಗಿಸಿ ಬಿಡುವಂತ ಶಕ್ತಿ ಈ ಪ್ರೀತಿಗಿದೆ..!!
ಪ್ರೀತಿ ಅಂದರೆ ಅದೊಂದು ನಂಬಿಕೆ... ನಿನ್ನಾ ಜೊತೆ ನಾನೀದ್ದೀನಿ ಅನ್ನೋ ಭರವಸೆ... ತಾ ಪ್ರೀತಿಸಿದ ಜೀವ ಅದು ಈ ಭೂಮಿಯ ಮೇಲೆ ಎಲ್ಲೇ ಇದ್ದರೂ ಚೆನ್ನಾಗಿರಲಿ ಅನ್ನೋ ನಿಸ್ವಾರ್ಥ ಭಾವ ಬಹುಶಃ ಈ ಪ್ರೀತಿಗಲ್ಲದೆ ಮತ್ತ್ಯಾವುದಕ್ಕೂ ಇರಲಿಕ್ಕಿಲ್ಲಾ.. ಯಾಕೆಂದರೆ ಪ್ರೀತಿನಾ ಪಡೆದುಕೊಳ್ಳುವುದಕ್ಕಿಂತ ಕೊಡೋದರಲ್ಲೇ ಜಾಸ್ತಿ ಖುಷಿ ಇರೋದು..!! ಒಂದು ನಿಷ್ಕಲ್ಮಶ ಪ್ರೀತಿಗೆ ಯಾರು ಯಾವತ್ತು ಮೋಸ ಮಾಡೋಕೆ ಆಗಲ್ಲಾ.., ಹಾಗೊಂದುವೇಳೆ ಮಾಡಿದರೂ ಕೂಡ ಅದು ಅವರಿಗೆ ಅವರೇ ಮಾಡಿಕೊಂಡ ಮೋಸವಾಗಿರುತ್ತೆ ಹೊರತು ಪ್ರೀತಿಗಲ್ಲಾ..!!

ಜೀವನದ ಪ್ರತಿ ಹಂತದಲ್ಲೂ ಮನಸು ತಾನೇ ತಾನಾಗಿ ಪ್ರೀತಿಯನ್ನು ಅರಸಿ ಹೋಗುತ್ತೆ... ಚಿಕ್ಕಂದಿನಲ್ಲಿ ಅಪ್ಪ, ಅಮ್ಮನಾ ಅಕ್ಕರೆಯ ಪ್ರೀತಿ... ಬೆಳೆಯುವಾಗ ಅಣ್ಣ, ತಮ್ಮಂದಿರೊಂದಿಗಿನ ಕಿತ್ತಾಟದ ಪ್ರೀತಿ., ಜೊತೆಗೆ ಸ್ನೇಹಿತರ ಮುದ್ದು ಪ್ರೀತಿ.. ಯೌವ್ವನದಲ್ಲಿ ಸಂಗಾತಿಯ ನೆಚ್ಚಿನ ಪ್ರೀತಿ... ವೃದ್ಯಾಪ್ಯದಲ್ಲಿ ಮಕ್ಕಳ ಭರವಸೆಯ ಪ್ರೀತಿ... ಪ್ರತಿ ಜೀವಿಗೂ., ಪ್ರತಿಯೊಬ್ಬರ ಜೀವನಕ್ಕೂ ಅತ್ಯವಶ್ಯಕ..!! ಪ್ರತಿಯೊಬ್ಬರೂ ಕೂಡ ಅವರ ಜೀವನದಲ್ಲಿ ಒಂದು ಮಹತ್ತರವಾದ ಸ್ಥಾನವನ್ನ ಈ ಪ್ರೀತಿಗೆ ಕೊಟ್ಟಿರ್ತಾರೆ., ಪ್ರೀತಿ ಇಲ್ಲದ ಜೀವಿ ಆಗಲಿ ಜೀವನ ಆಗಲಿ ಖಂಡಿತಾ ಈ ಭೂಮಿಯ ಮೇಲೆ ಎಲ್ಲೂ ಇರಲಿಕ್ಕಿಲ್ಲಾ..
ಅದನ್ನ ಅರಿತೇ ಇರಬೇಕು ಜಿ ಎಸ್ ಶಿವರುದ್ರಪ್ಪ ಅವರು
"ಪ್ರೀತಿ ಇಲ್ಲದ ಮೇಲೆ..
ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ ?"
ಅಂತಾ ಬರೆದಿರೋದು..!! ಒಟ್ಟಿನಲ್ಲಿ ಈ ಪ್ರೀತಿಯಾ ಬಗ್ಗೆ ಯಾರೇ ಎಷ್ಟೇ ವರ್ಣಿಸಿದರೂ., ಏನನ್ನೆಲ್ಲ ಗೀಚಿ ಹೋಗಿದ್ದರೂ ಕೂಡ ಅದನ್ನು ಅರ್ಥೈಸೋಕೇ ಮಾತ್ರ ಯಾರಿಂದಲೂ ಸಾಧ್ಯವಿಲ್ಲ.. ಕೇವಲ ಅನುಭವಿಸಬಹುದಷ್ಟೆ..!! ಜೀವನದ ಪ್ರತಿ ಹೆಜ್ಜೆಯಲ್ಲೂ ಪ್ರೀತಿಯನ್ನು ಬಯಸುವ ನಮಗೆ ಅದರಿದ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯವೇ ಸರಿ.., ಪ್ರೀತಿಯಿಲ್ಲದ ಬದುಕು ಹಾಡಲು ಮರೆತ ಕೋಗಿಲೆಯಂತೆ ಅಕ್ಷರಶಃ ಜೀವಂತ ಶವ..!!
ಅಂತಾ ಒಂದು ಪ್ರೀತಿಯಾ ಬಗ್ಗೆ "ಈ ಮನಸಾದರೂ" ಇಷ್ಟೆಲ್ಲಾ ಯೋಚಿಸೋಕೆ ಕಾರಣ ಬಹುಶ: ಅಂತದೊಂದು ನಿಷ್ಕಲ್ಮಶ ಪ್ರೀತಿನೇ..!! :-) :-)
ಬರೀ ನೋವನಷ್ಟೆ ಕಂಡಿದ್ದ ಮನಸ್ಸಿಗೆ ಸಾಂತ್ವಾನ ಹೇಳಿ., ಧೈರ್ಯ ತುಂಬುತ್ತಿದ್ದ ಆ ನಿನ್ನ ಮಾತುಗಳಿಗೆ ಸೋತೋಯಿತೋ ಏನೋ ಈ ಮನಸು ಗೋತ್ತಿಲ್ಲ..!! ಈ ಹೃದಯವೆಂಬ ಹೂದೋಟದಲಿ ಪ್ರೀತಿಯ ಹೂವರಳಿಸಿದೆ... ಯಾವ ಜನ್ಮದ ಅನುಬಂಧವೋ ನೀ ಬಂದೆ ಬೆಳಕಾಗಿ ಕತ್ತಲು ಕವಿದ ಬಾಳಿಗೆ..!!
ಎಂದೂ ಬಯಸಿರದ ನಿಸ್ವಾರ್ಥ ಪ್ರೀತಿ ತನ್ನದಾದ ಸಂತಸದಲ್ಲೇ ಈ ಮನವೂ ಕೂಡ ಧನ್ಯವಾಗಿದೆ... ಆ ನಿನ್ನಾ ಮುಗ್ಧ., ನಿಷ್ಕಲ್ಮಶ ಪ್ರೀತಿಗೆ ಪ್ರತಿಯಾಗಿ ಏನು ಕೊಡಬೇಕೋ ತಿಳಿಯುತ್ತಿಲ್ಲ ಕಣೋ..!! ಆದರೆ ಈ ಪೆದ್ದು ಮನಸ್ಸಿನ ಮುದ್ದು ಪ್ರೀತಿ ಎಂದೆಂದಿಗೂ ನಿನಗೆ ಮಾತ್ರ ಮೀಸಲು..!! ನನ್ನೊಟ್ಟಿಗಿದ್ದರೂ.., ಇರದಿದ್ದರೂ..!!! :-) :-)
ಮುದ್ದಾದ ಆ ನಿನ್ನಾ ಪ್ರೀತಿಗೆ... ಅದರ ರೀತಿಗೆ... ಈ ಪ್ರೀತಿಯೇ ಕಾಣಿಕೆ..!!
Preeti amara madhura ......... :)
ReplyDeletesuperb article
ReplyDeletenimmolage olleya barahagaaraniddaane!
ReplyDeleteBiduvu sikkaagella avanondige maatadi!
Illa avanondige maatanaaduvudakkaagiye biduvu maadikolli!
Aatha nimma mouniya maatugala lekhaniya moolaka ellaballa!
ShuBhaVaagali!
Mysore gal ha,
ReplyDeletehttp://navakarnataka.blogspot.com/2013/12/aganitha-vismaya-of-rohith.html#comment-form