Saturday, 3 September 2011

ಮೌನ ಮಾತಾದಾಗ..!!

ನನ್ Lifeನಲ್ಲಿ ಈ ರೀತಿಯ ದಿನಗಳು ಕೂಡ ಬರುತ್ತೆ ಎಂದು ನಾನು ಯಾವತ್ತು Expect ಮಾಡಿರಲಿಲ್ಲ... ಮನಸ್ಸಿಗೆ ಹತ್ತಿರವಾದವರೆ ಕೊನೆಗೆ ಹೀಗೆ ಯಾವ ಸುಳಿವನ್ನು ಕೊಡದೆ ದೂರ ಹೋಗ್ತಾರೆ ಅಂತಾನೂ Think ಮಾಡಿರಲಿಲ್ಲ...! ಆದರೆ ನೋಡು ನೋಡ್ತಿದಂತೆ ಕಣ್ಮುಂದೆನೇ ಎಲ್ಲವೂ ನಡೆದು ಹೋಯ್ತು... ಕೊನೆಗೇ ನನ್ನದು ಅಂತಾ ನನಗಾಗಿ ನನ್ ಜೊತೆ ಉಳಿದುಕೊಂಡಿದ್ದು ಬರೀ ಮೌನ, ಒಂಟಿತನ, ಬೇಸರ ಮಾತ್ರ...!
ಪ್ರತಿಯೊಬ್ಬರು ಅವರ Lifeನಲ್ಲಿ ಹಲವು ರೀತಿಯ ನೋವು, ಯಾತನೆಗಳನ್ನ ಅನುಭವಿಸ್ತಾನೇ ಇರ್ತಾರೆ ಅದಕ್ಕೆ ನಾನೂ ಹೊರತಲ್ಲ...! "ಸಾವಿಲ್ಲದ ಮನೆಯಿಲ್ಲ" ಎಂಬಂತೆ "ನೋವಿಲ್ಲದ ಮನಸ್ಸಿಲ್ಲ" ಅಂತಾ ಹೇಳಬಹುದು... ದೇಹಕ್ಕೆ ಆಗೂ ನೋವನ್ನ ಹೇಗಾದರೂ ಸಹಿಸಬಹುದು ಆದರೆ ಈ ಮನಸ್ಸಿಗಾಗೋ ನೋವನ್ನ ಸಹಿಸೋದು ಅಷ್ಟು ಸುಲಭವಾದ ಮಾತಲ್ಲ ಅಲ್ವಾ..!!ನಾನು ಪುಟ್ಟ ಮನಸಿನ ಹುಚ್ಚು ಹುಡುಗಿ... ಕನಸುಗಳನ್ನ ಕಾಣ್ತಾ ಅದರ ಜೊತೆನೇ ಬದುಕ್ತಾ ಇರ್ತೀನಿ... ಹಾಗೆ ಕಂಡ ಕನಸುಗಳಲ್ಲಿ ನನಸಾದವು "ಕೆಲವು", ಕಣ್ಣೀರಲ್ಲೆ ತೊಳೆದು ಹೋದಂತವು "ಹಲವು"...


ಪ್ರತಿಯೊಬ್ಬರ ಜೀವನದಲ್ಲೂ ಎಲ್ರೂ ಇರ್ತಾರೆ... Family, Friends, ಬಂಧುಗಳು ಹೀಗೆ ಬಂದು "ಹೋಗುವವರ" ದೊಡ್ಡ List ಇರುತ್ತೆ... ಆದರೂ ಒಮ್ಮೊಮ್ಮೆ ಈ ತರ ಒಂಟಿತನ ಅನ್ನೋದು ಎಲ್ಲರನ್ನು ಒಂದಲ್ಲ ಒಂದು Situation ನಲ್ಲಿ ಸಹಜವಾಗಿನೇ ಕಾಡುತ್ತೆ...!!


ಹಾಗೆ ಕೆಲವೊಂದು ಸಲ ಅದೇ ಒಂಟಿತನ'ನೇ ಮನಸ್ಸಿಗೆ ತುಂಬಾ ಹತ್ತಿರವಾಗಿ ಬಿಡುತ್ತೆ...! ನಮ್ಮನ್ನ ಸರಿಯಾಗಿ ಅರಿಯದೆ ಹೋದವರು And ಅರಿಯಲು ಪ್ರಯತ್ನಿಸುತ್ತಿವವರಿಗಿಂತ ಒಂಟಿತನವೇ ಮೇಲು ಅನ್ಸೊಕೆ ಶುರುವಾಗಿ ಬಿಡುತ್ತೆ...! Finally ಒಂಟಿತನವೇ ನಮಗಾಗಿ ಉಳಿದಿರೋ Friend ಅನ್ನಿಸಿ.., ಕತ್ತಲ ಜೊತೆಗೆ ಮಾತಿಲ್ಲದ ಸಂವಾದ ನಡೆಸುತ್ತಾ.., ದುಃಖ ಹೊರ ಹೊಮ್ಮಿದಾಗ ಜೊತೆಯಾಗಿ ಹೊರ ಬರುವ ಭಾವಾತ್ಮಕ ಕಣ್ಣಾ ಹನಿಯಾ ಜೊತೆಗೆ ಪಿಸುಗುಡುವ ಮನದ ಮಾತುಗಳನ್ನ ಕೇಳಲು ನಿಶಬ್ಧವಾಗಿ ನಿಲ್ಲೋ ಹೃದಯದ ಬಡಿತವೇ ಮನಸ್ಸಿಗೆ ಪ್ರಿಯವಾಗಿ.., ಕೊನೆಗೆ ಈ ಮೌನ, ಒಂಟಿತನ ಮತ್ತ್ ಅದೇ ಬೇಸರನೇ ಇಷ್ಟವಾಗ್ತಾ ಹೋಗ್ಬಿಡುತ್ತೆ...!!


ಇದನೆಲ್ಲಾ ನೋಡಿದಾಗ ಒಂಟಿತನ And ತಮಗ್ಯಾರು ಇಲ್ಲಾ ಎಂಬ ಭಾವಕ್ಕಿಂತ ಅತಿಯಾದ ಬಡತನ ಬೇರೆ ಯಾವುದು ಇಲ್ಲಾ ಅಂತಾ "ಮದರ್ ತೆರೇಸಾ" ಅವರು ಹೇಳಿರೋದು ಎಷ್ಟು ನಿಜ ಅನ್ಸುತ್ತೆ ಅಲ್ವಾ..!ಏನೇ ಆದರೂ ಬೇಸರವಾದಾಗ ತಲೆ ನಿಮಿರಿಸಿ ಸಮಾಧಾನ ಮಾಡುವ "ತೊಡೆ".. ಹೆಗಲಿಗೆ ಹೆಗಲು ಕೊಟ್ಟು ಧೈರ್ಯ ತುಂಬುಲು ಒಂದು "ನುಡಿ".. ಬೇಜಾರಾದಾಗ ಗಂಟೆಗಟ್ಟಲೆ ಮಾತಾಡಲು ಮತ್ತು ಮನಸ್ಸಿನ ಇಷ್ಟ, ಕಷ್ಟಗಳನ್ನ ಹಂಚಿಕೊಳ್ಳಲು ಒಂದು "ಜೀವ".. ನೊಂದ ಮನಸ್ಸಿಗೆ ಸಾಂತ್ವನ ಹೇಳೋಕೆ ಒಂದು "ಮನಸು".. ಜೊತೆಗೆ ಇದ್ದಿದ್ರೆ ಈ ಜೀವನನೂ ಎಷ್ಟೋ ಚೆನ್ನಾಗಿರುತಿತ್ತು ಅನ್ನಿಸುತ್ತೆ..!!


ಇಷ್ಟೆಲ್ಲದರ ನಡುವೆನೂ ಕಳೆದು ಕೊಂಡದ್ದನ್ನ ಹುಡುಕುವ ವ್ಯರ್ಥ ಪ್ರಯತ್ನಕ್ಕಿಂತ, ಉಳಿದುಕೊಂಡಿರೋದ್ದನ್ನೇ ಕಾಪಾಡಿಕೊಂಡು ಹೋಗೋದು Better ಅಂತಾ ತಿಳ್ಕೊಂಡು ನನ್ ಮನಸ್ಸನ ನಾನೇ ಸಮಾಧಾನ ಮಾಡ್ಕೊತೀನಿ..!!

But ಒಂದೊಂದು ಸಲ ಮನಸ್ಸಿಗೆ ತುಂಬಾ ಬೇಜಾರಾದಾಗ... ದುಃಖಕ್ಕಿಂತ "ದುಗುಡನೇ" ಹೆಚ್ಚಾದಾಗ.., ಅಳುವಿಗಿಂತ "ಅಳುಕೇ" ಮೇಲಾದಾಗ.., ಹೀಗೆ ಮೌನವೇ ಮಾತಾಗಿ ಹೊರ ಬರುತ್ತೆ..!!

12 comments:

 1. ಇದು ಮನಸ್ಸಿನ ಗೊಂದಲ ಸ್ಥಿತಿಯ ವಿವರಣೆ. ನನಗೂ ಇದೇ ರೀತಿಯ ಅನುಭವವಾಗುವುದುಂಟು ಆದರೆ ಏನು ಮಾಡುವುದು ಜೀವ ಹೊತ್ತು ಬಂದಾಗಿದೆ ಸಹಿಸಬೇಕಾದದ್ದನ್ನು ಸಹಿಸಿಯೇ ತೀರಬೇಕು, ಹಾಗೇಯೆ ಸಂತಸದ ಸಮಯವನ್ನು ತುಂಬು ಹೃದಯದಿಂದ ಆಹ್ವಾನಿಸಬೇಕು. ಬಡತನವೆನ್ನುವುದು ಬರಿ ನೋಡುವುದಕಷ್ಟೆ. ಮನಸ್ಸಿನ ನಿರಾಳತೆಯ ಮುಂದೆ ಎಲ್ಲವೂ ಶೂನ್ಯ ಅಲ್ಲವೆ ? ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ' ಎಂಬಂತೆ ಹತ್ತಿರದಲ್ಲೇ ಸಿಗಬಹುದಾದ ಗೆಳೆಯರನ್ನು, ಆತ್ಮೀಯರನ್ನು ಹುಡುಕಲಾಗದೆ ಇಲ್ಲ ಸಲ್ಲದ್ದನ್ನು ಎಲ್ಲೋ ಇರುವವರಿಂದ ನಿರೀಕ್ಷಿಸುತ್ತೇವೆ .......

  ReplyDelete
 2. ವಸಂತ್ ನೀವ್ ಹೇಳಿದ್ದು ಅಕ್ಷರ ಸಹಾ ನಿಜ... ಇರುವುದೆಲ್ಲವಾ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನಾ...:):)

  ReplyDelete
 3. ಏಕಾಂತದ ಇಂಚಿಂಚಿನ್ನೂ ತುಂಬಾ ಸುಂದರವಾಗಿ ನಿರೂಪಿಸಿದ್ದೀಯ ದೀಪು..:) ’ಮೌನ ಮಾತಾದಾಗ’ ಶೀರ್ಷಿಕೆ ಹಿಡಿಸಿತು.. ಮೌನ ಮಾತಾಗುವುದು ನಾವು ನಮ್ಮಲ್ಲೇ ಕಳೆದು ಹೋದಾಗ ಮತ್ತು ಮನಸ್ಸು ತಾಳಿಕೊಳ್ಳುವು ಪರಿಧಿ ಮೀರಿದಾಗ ಆತ್ಮೀಯರೊಟ್ಟಿಗೆ.. ಮತ್ತೊಬ್ಬೊರೆದುರು ಮೌನ ಮಾತಾದಾಗ ಸಮಸ್ಯೆಗಳು ಬಗೆಹರಿದು ಮನಸ್ಸು ಹಗುರಾಗುತ್ತದೆ, ಅಂತರ್ಮುಖಿಯಾದಾಗ ನಮ್ಮನ್ನೇ ಅರಿಯುವ ಪ್ರಯತ್ನ ಮಾಡುತ್ತೇವೆ.. ಮನಸ್ಸಿನೊಳಗೆ ಅನುಸಂಧಾನಗಳು ಏರ್ಪಟ್ಟು ಮನಸ್ಸಿಗೆ ಧೃಡತೆಯನ್ನು ಕೊಡುತ್ತದೆ..:))) so ಏಕಾಂತವೂ ಸುಂದರವೇ ಕೆಲವೊಮ್ಮೆ..:)))

  ReplyDelete
 4. ಮೌನ ಮಾತಾದಾಗ ತುಂಬಾ ಚೆನ್ನಾಗಿದೆ ದೀಪು .ಹೀಗೆ ಬರಿತಾಯಿರಿ ಪ್ರತಿಯೊಬ್ಬರಲ್ಲೂ ಮೌನ ಮಾತಾಗಬೇಕು ಆಗಲೇ ಮನಸ್ಸು ಹಗುರವಾಗುತ್ತದೆ

  ReplyDelete
 5. ದೀಪುರವರೇ ಮೊದಮೊದಲು ಏನೋ ನೋವು ಹೇಳಿಕೊಂಡರೂ ಅಂತಿಮ ತೀರ್ಮಾನ ಮೆಚ್ಚುವಂತದ್ದು. ವಂದನೆಗಳು

  ReplyDelete
 6. ನಿನ್ನ ಹಾಗೆ ನೊಂದವಳು13 December 2013 at 17:41

  ಗೆಳತಿ ನಾವಂದು ಕೊಂಡ ಹಾಗೆ ಜೀವನ ಇರುವದಿಲ್ಲ. ಒಬ್ಬರ ಸುಳ್ಲೂ ಮಾತನ್ನು ಸತ್ಯವೆಂದು ನಂಬಿ ಭ್ರಮೆಯೊಂದಿಗೆ ಸಾಗಿ ಬದುಕು ಕಳೆದು ಕೊಂಡಾಗಲೆ ನಮಗೆ ಅರಿವಾಗುತ್ತದೆ. ನಾವೆಷ್ಟು ಒಂಟಿ ಎಂದು. ಅಸಲಿಗೆ ಅವರು ನಾವಂದು ಕೊಂಡಷ್ಟು ಹಾಗೂ ನಾವು ತಿಳಿದಷ್ಟು ಅವರು ನಮ್ಮ ನಂಬಿಕೆಗೆ ಅರ್ಹರಾಗಿರುವದಿಲ್ಲ.

  ನಿನ್ನ ಹಾಗೆ ನೊಂದ ಗೆಳತಿ ನಾನು

  ReplyDelete
 7. This comment has been removed by the author.

  ReplyDelete
 8. ನಿಮ್ಮೊಳಗೊಬ್ಬ ಸುಂದರ ಮನಸ್ಸಿನ ಕವಿ ಇದ್ದಾನೆ. ಅವನಿಗೆ ಕೆಲಸ ಕೊಟ್ಟರೆ ಖಂಡಿತಾ ನೀವು ನಿಮ್ಮ ಸಮಸ್ಯೆ, ದುಃಖ, ನೋವುಗಳನ್ನು ದೂರ ಮಾಡಬಹುದು. ಉಳಿದಂತೆ ಮನಸ್ಸಿನ ಭಾರ ಇಳಿಸಲು ನಮ್ಮಂತಹ ಗೆಳೆಯರಿದ್ದೇವೆ. ಡೋಂಟ್ ವರಿ ಬಿ ಹ್ಯಾಪಿ ಡಿಯರ್....

  ReplyDelete
 9. Deepuravare, Nannu indige 2 varushagal inde abhipraaya baredidde. Aa bagge Face Book ee dina nenapu maaditu. Sadaa sukhiyaagiri. Dhanyavaadagalu.

  ReplyDelete
 10. ಸ್ನೇಹಿತರೆ..... ಜೀವನವೆಂಬುವುದು ಹಲಸಿನ ಹಣ್ಣಿನ ಹಾಗೆ. ಮುಳ್ಳು ಅಂಟುಗಳನ್ನು ಮೀರಿದರೆ ಮಾತ್ರ ಸಿಹಿ ನಮ್ಮದಾಗುವುದು.. ಆ ಸಿಹಿ ಅನುಭವಿಸಿದಾಗ ಹಿಂದಿನ ಮುಳ್ಳಿನ ಸ್ಪರ್ಶ, ಸಿಹಿ ಪಡೆಯಲು ನಾವು ಅನುಭವಿಸಿದ ಯಾತನೆ ಯಾರೂ ಅನುಭಿಸಿರಲಾರರು ಎನಿಸುತ್ತದೆ....ಆದರೆ ನಾವು ಸಿಹಿ ಪಡೆದಾಗ ಆಗುವ ಸಾರ್ಥಕತೆಗೆ ಆಗುವ ಸಂತೋಷಕ್ಕೆ ಪಾರವೇ ಇಲ್ಲ...ಅಲ್ವೆ ಸ್ನೇಹಿತರೆ ನಿಮಗೂ ಈ ಅನುಭವ ಹಾಗಿರಬಹುದು ...ಹಾಗಾಗಿ ಯಾವಾಗಲೂ ಸಮಸ್ಯೆ ಇದೆ ಎಂದು ನರಳಾಡುವ ಬದಲು ಹೇಗೆ ಆ ಸಮಸ್ಯೆ ಬಗೆಹರಿಸಬೇಕೆಂಬುದನ್ನು ಹುಡುಕಬೇಕು..ಆಗಲೇ ಜೀವನ ಸರಳ...

  ReplyDelete